Saturday, June 6, 2026
Homeಕರಾವಳಿಉಡುಪಿಉಡುಪಿ; :  ವರದಕ್ಷಿಣೆ ಕಿರುಕುಳ ಆರೋಪ; ಆರು ಮಂದಿಯ ವಿರುದ್ಧ ದೂರು ದಾಖಲು

ಉಡುಪಿ; :  ವರದಕ್ಷಿಣೆ ಕಿರುಕುಳ ಆರೋಪ; ಆರು ಮಂದಿಯ ವಿರುದ್ಧ ದೂರು ದಾಖಲು

- Advertisement -
- Advertisement -

ಉಡುಪಿ;  ವರದಕ್ಷಿಣೆ ಕಿರುಕುಳ ನೀಡಿದ ಕುರಿತು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಿನಾಶ್‌ ಕೃಷ್ಣ ನಾಯ್ಕ ಹಾಗೂ ಚಂದ್ರಾವತಿ ನಾಯ್ಕ, ವಿನಾಯಕ ನಾಯ್ಕ, ಪ್ರಭಾಕರ ನಾಯ್ಕ, ಲಲಿತಾ, ಶಕುಂತಲಾ ವಿರುದ್ಧ ಕಾವ್ರಾಡಿ ನಿವಾಸಿ ಶೈಲಾ ಅವರು ದೂರು ನೀಡಿದ್ದಾರೆ.

ಇನ್ನೊಬ್ಬ ಆರೋಪಿ ಭದ್ರ ಕುಲಾಲ್‌ ಎಂಬಾತ ಶೈಲಾ ಹಾಗೂ ಅವಿನಾಶ್‌ ಅವರ ಮದುವೆಯ ಮಧ್ಯವರ್ತಿ.

2021ರಲ್ಲಿ ತ್ರಾಸಿ ಕಮ್ಮಾರಕೊಡ್ಲುವಿನಲ್ಲಿ ವಿವಾಹ ನಡೆದಿದ್ದು ವರದಕ್ಷಿಣೆ ರೂಪದಲ್ಲಿ 5 ಲಕ್ಷ ರೂ. ಚಿನ್ನಾಭರಣ, ಮದುವೆಗೆ ಮುಂಚೆ 5 ಲಕ್ಷ ರೂ. ಹಣ ಪಡೆದಿದ್ದಾರೆ. ಮುಂಬಯಿಯಲ್ಲಿ ವೈವಾಹಿಕ ಜೀವನ ಆರಂಭಿಸಿ, 3 ತಿಂಗಳ ಬಳಿಕ ಗಂಡ, ಅತ್ತೆ ಹಾಗೂ ಮನೆಯವರು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ಮದುವೆ ಸ‌ಮಯ ಹಾಕಿದ 5 ಲಕ್ಷ ರೂ|ಗಳ ಚಿನ್ನಾಭರಣ ಬೆದರಿಸಿ ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2022 ಆಗಸ್ಟ್‌ ನಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ತಂದೆಯ ಮನೆಗೆ ಕಳುಹಿಸಿಕೊಟ್ಟರು. ಈ ಜುಲೈಯಲ್ಲಿ ಮತ್ತೆ ವರದಕ್ಷಿಣೆಗಾಗಿ ಪತಿ ಕರೆ ಮಾಡಿ ನೀಡದಿದ್ದರೆ ಕೊಲೆ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!