Wednesday, June 24, 2026
Homeಪ್ರಮುಖ-ಸುದ್ದಿಇಂದು ಬೆಳಗ್ಗೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಯಲ್ಲಿ ಭಾಗಿ

ಇಂದು ಬೆಳಗ್ಗೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಯಲ್ಲಿ ಭಾಗಿ

- Advertisement -
- Advertisement -

ವಿಶಾಖಪಟ್ಟಣಂ: ಇಂದು 11ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಇಂದು ನಡೆಯುವ ಯೋಗ ಕಾರ್ಯಕ್ರಮದಲ್ಲಿ ಬೆಳಗ್ಗೆ 6.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

ಆರ್‌.ಕೆ. ಬೀಚ್‌ನಿಂದ ಭೋಗಪುರಂವರೆಗೆ 26 ಕಿಲೋ ಮೀಟರ್ ಉದ್ದದ ಕಾರಿಡಾರ್‌ನಲ್ಲಿ ಯೋಗ ನಡೆಯಲಿದ್ದು, ಮೂರು ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಮಾಡಲಿದ್ದಾರೆ.

ಅಲ್ಲದೇ ಸುಮಾರು 25,000 ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಪ್ರದರ್ಶನ ಮಾಡಲಿದ್ದು, ಈ ಮೂಲಕ ಯೋಗ ದಿನದಂದು ಆಂಧ್ರಪ್ರದೇಶ ರಾಜ್ಯ ಹೊಸ ವಿಶ್ವ ದಾಖಲೆ ಸ್ಥಾಪಿಸುವ ಗುರಿ ಹೊಂದಿದೆ.ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಸಚಿವರು ಪ್ರಧಾನಿ ಮೋದಿ ಜೊತೆ ಯೋಗ ಮಾಡಲಿದ್ದಾರೆ

- Advertisement -

Latest News

error: Content is protected !!