Thursday, June 4, 2026
Homeತಾಜಾ ಸುದ್ದಿಸಮಾಜವಾದಿ ಪಕ್ಷದ ನಾಯಕನ ಯಡವಟ್ಟಿನ ಟ್ವೀಟ್: ಹಕ್ಕಿ ಜ್ವರಕ್ಕೆ ಪ್ರಧಾನಿ ಮೋದಿ ಕಾರಣ ಎಂದ ಐಪಿ...

ಸಮಾಜವಾದಿ ಪಕ್ಷದ ನಾಯಕನ ಯಡವಟ್ಟಿನ ಟ್ವೀಟ್: ಹಕ್ಕಿ ಜ್ವರಕ್ಕೆ ಪ್ರಧಾನಿ ಮೋದಿ ಕಾರಣ ಎಂದ ಐಪಿ ಸಿಂಗ್

- Advertisement -
- Advertisement -

ನವದೆಹಲಿ: ಪ್ರಧಾನಿ ಮೋದಿ ಹಕ್ಕಿಗಳಿಗೆ ಕಾಳು ನೀಡಿದ ಬಳಿಕವೇ ದೇಶದಲ್ಲಿ ಹಕ್ಕಿ ಜ್ವರ ಶುರುವಾಗಿದೆ ಅಂತಾ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್​ ಯಡವಟ್ಟು ಟ್ವೀಟ್​ ಮಾಡಿದ್ದಾರೆ.

ಟ್ವಿಟರ್​ನಲ್ಲಿ ನವಿಲಿಗೆ ಪ್ರಧಾನಿ ಮೋದಿ ಕಾಳು ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ ಐಪಿ ಸಿಂಗ್, ಈ ಮನುಷ್ಯನಿಗೆ ಏನು ಮಾಡೋದು..? ಇವರು ಆ ಬಡಪಾಯಿ ಹಕ್ಕಿಗಳಿಗೆ ಕಾಳು ಹಾಕಿದ್ರು. ಈಗ ಅವು ಹಕ್ಕಿ ಜ್ವರದಿಂದ ಬಳಲುವಂತಾಗಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ.

ಸದ್ಯ ಭಾರತದಲ್ಲಿ ಕೇರಳ , ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಹಕ್ಕಿ ಜ್ವರ ವ್ಯಾಪಿಸದಂತೆ ತಡೆಯಲು ಸಂಬಂಧ ಪಟ್ಟ ಸರ್ಕಾರದ ಅಧಿಕಾರಿಗಳು ಹಕ್ಕಿಗಳನ್ನ ಕೊಲ್ಲುತ್ತಿದ್ದಾರೆ. ಕೊರೊನಾ ನಡುವೆಯೇ ಹಕ್ಕಿ ಜ್ವರವೂ ಶುರುವಾಗಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

- Advertisement -

Latest News

error: Content is protected !!