Saturday, June 6, 2026
Homeತಾಜಾ ಸುದ್ದಿದೆಹಲಿ ತೊರೆಯುತ್ತಿದ್ದಾರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ: ಎಐಸಿಸಿ ಅಧ್ಯಕ್ಷೆಯ ಈ ನಿರ್ಧಾರಕ್ಕೆ ಕಾರಣವೇನು?

ದೆಹಲಿ ತೊರೆಯುತ್ತಿದ್ದಾರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ: ಎಐಸಿಸಿ ಅಧ್ಯಕ್ಷೆಯ ಈ ನಿರ್ಧಾರಕ್ಕೆ ಕಾರಣವೇನು?

- Advertisement -
- Advertisement -

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ತೊರೆಯೋದಕ್ಕೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಅರೆ! ಅಂತಹದ್ದೇನಾಯ್ತು? ಅಂಥಾ ಯೋಚಿಸುತ್ತಿದ್ದೀರಾ. ಅದಕ್ಕೆ ಕಾರಣ ಇದೆ..

ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೆಲವು ದಿನಗಳವರೆಗೆ ದೆಹಲಿಯಿಂದ ಬೇರೆಡೆ ತೆರಲುವಂತೆ ವೈದ್ಯರು ತಿಳಿಸಿದ್ದಾರೆ. ನವದೆಹಲಿಯಲ್ಲಿ ಭಾರೀ ಪ್ರಮಾಣದ ವಾಯುಮಾಲಿನ್ಯವಿರುವ ಕಾರಣ ಸೋನಿಯಾ ಅವರ ಆರೋಗ್ಯದ ಮೇಲೆ ಅದು ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂಬ ಹಿನ್ನೆಲೆ ಈ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ.

ಸೋನಿಯಾ ಗಾಂಧಿ ಕೆಲವು ದಿನಗಳವರೆಗೆ ಗೋವಾ ಅಥವಾ ಚೆನ್ನೈಗೆ ಸ್ಥಳಾಂತರಗೊಳ್ಳಬಹುದು ಎಂದು ಮೂಲವೊಂದು ತಿಳಿಸಿದೆ. ಸೋನಿಯಾ ಅವರು ಇಂದು ದೆಹಲಿಯಿಂದ ತೆರಳುವ ಸಾಧ್ಯತೆಯಿದೆ ಮತ್ತು ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ

- Advertisement -

Latest News

error: Content is protected !!