Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು; ಪೆಟ್ರೋಲ್ ಸರಿದು ತಾಯಿಯನ್ನು ಕೊ*ಲೆಗೈದ ಪಾಪಿ ಮಗ

ಕಾಸರಗೋಡು; ಪೆಟ್ರೋಲ್ ಸರಿದು ತಾಯಿಯನ್ನು ಕೊ*ಲೆಗೈದ ಪಾಪಿ ಮಗ

- Advertisement -
- Advertisement -

ಕಾಸರಗೋಡು; ಪೆಟ್ರೋಲ್ ಸರಿದು ಪಾಪಿ ಮಗನೊಬ್ಬ ತಾಯಿಯನ್ನು ಕೊಲೆಗೈದ ಘಟನೆ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಹಿಲ್ಡಾ (60) ಕೊಲೆಯಾದ ಮಹಿಳೆ. ಪುತ್ರ ಮೆಲ್ವಿನ್ ಕೊಲೆಗೈದ ಆರೋಪಿ.ನೆರೆಮನೆಯ ಲೋಲಿಟಾ (30) ಎಂಬವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಲ್ಡಾ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿದ್ದರು. ಮಲಗಿದ್ದ ಹಿಲ್ಡಾ ಅವರ ಮೇಲೆ ಮಗ ಮೆಲ್ವಿನ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಈ ವೇಳೆ ಹಿಲ್ಡಾ ಅವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಸುಟ್ಟಗಾಯಗಳಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಕೊಂದ ಬಳಿಕ ತಾಯಿಗೆ ಹುಷಾರಿಲ್ಲ ಎಂದು ನೆರೆಮನೆಯ ಲೋಲಿಟಾರವರನ್ನು ಮನೆಗೆ ಕರೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಅವರಿಗೂ ಗಂಭೀರ ಗಾಯಗಳಾಗಿವೆ. ತಾಯಿ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇನ್ನೋರ್ವ ಮಗ ಆಲ್ವಿನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಕೃತಕ್ಕೆ ಕಾರಣ ತಿಳಿದು ಬಂದಿಲ್ಲ.ಮೃತದೇಹ ಮನೆ ಸಮೀಪದ ಪೊದೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ತಲುಪಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!