ಉಡುಪಿ: ನಾಡೋಜ ಡಾ. ಜಿ.ಶಂಕರ್ ಮುಂದಾಳತ್ವದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊರೋನಾ ವಿರುದ್ಧ ಹೋರಾಡಲು ವೈದ್ಯಕೀಯ ಇಲಾಖೆಗೆ ಬೇಕಾಗುವ 2500 ಎನ್ -95 ಮಾಸ್ಕ್, 1ಲಕ್ಷ ಫೇಸ್ ಮಾಸ್ಕ್, ಐ ಶೀಲ್ಡ್, ಕನ್ನಡಕ ಮತ್ತು ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಸ್ಟರಲೈಜ್ಡ್ ಗ್ಲೌಸ್ ಹೀಗೆ ವೈದ್ಯಕೀಯ ರಕ್ಷಣಾ ಸಲಕರಣೆ ಸಹಿತ ವಿವಿಧ ಸಾಮಗ್ರಿಗಳನ್ನು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದು ಅವುಗಳನ್ನು ವೈದ್ಯರು, ದಾದಿಯರು, ಆಸ್ಪತ್ರೆಯ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.
ನಿರಂತರವಾಗಿ ಕೊರೊನ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ ಮತ್ತು ಆಶಾ ಕಾರ್ಯ ಕರ್ತರಿಗೆ ಕೂಡ ಮಾಸ್ಕ್ ಗಳನ್ನು ವಿತರಿಸಲಾಗುತ್ತದೆ. ಜೊತೆಗೆ ಕೊರೊನ ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಿಸಲು ಕಷ್ಟ ಪಡುತ್ತಿರುವ ಸುಮಾರು 1500 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತಮ್ಮ ನಿತ್ಯದ ಜೀವನಕ್ಕೆ ಬೇಕಾಗಿರುವ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ದವಸ, ದಾನ್ಯಗಳನ್ನೊಳಗೊಂಡ ಆಹಾರ ಸಾಮಗ್ರಿಗಳ ಪ್ಯಾಕೆಟ್ ನ್ನು ಈಗಾಗಲೇ ಅರ್ಹ ಬಡ ಕುಟುಂಬಗಳಿಗೆ ಒದಗಿಸುವ ಕಾರ್ಯವನ್ನು ಕೂಡ ಮಾಡಿರುತ್ತಾರೆ.