Thursday, June 13, 2024
Homeಇತರಕೊರೋನಾ ಪರಿಹಾರ: ಹಿಂದೂ, ಕ್ರಿಶ್ಚಿಯನ್ನರನ್ನು ಕಡೆಗಣಿಸಿದ ಪಾಪಿ ಪಾಕಿಸ್ತಾನ

ಕೊರೋನಾ ಪರಿಹಾರ: ಹಿಂದೂ, ಕ್ರಿಶ್ಚಿಯನ್ನರನ್ನು ಕಡೆಗಣಿಸಿದ ಪಾಪಿ ಪಾಕಿಸ್ತಾನ

spot_img
- Advertisement -
- Advertisement -

ಕೊರೋನಾ ಎಂಬ ಭೀಕರ ವೈರಸ್ ನ ರುದ್ರ ನರ್ತನಕ್ಕೆ ಜಗತ್ತೇ ಸಂಕಷ್ಟದಲ್ಲಿದೆ. ಜಗತ್ತಿಗೆ ವಿಶ್ವಗುರು ಎನಿಸಿರುವ ಭಾರತ ಲಾಕ್ ಡೌನ್ ಹೇರಿದರೂ ಸರಕಾರ ಪ್ರಜೆಗಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳಿಗೆ ಕಡಿಮೆ ಮಾಡಿಲ್ಲ. ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಕ್ಕೆ ಈಗಾಗಲೇ ದೊಡ್ಡ ಮಟ್ಟದ ಪ್ಯಾಕೇಜ್ ಅನ್ನೇ ಘೋಷಿಸಿದೆ. ಆದರೆ ಪಾಪಿ ಪಾಕಿಸ್ತಾನ ಮಾತ್ರ ಪರಿಹಾರ ನೀಡುವ ಸಮಯದಲ್ಲಿ ಧಾರ್ಮಿಕ ತಾರತಮ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೌದು ಪಾಕಿಸ್ತಾನವೆಂಬ ನರಕದಲ್ಲಿ ಇನ್ನು ಬದುಕುತ್ತಿರುವ ಅಲ್ಪಸಂಖ್ಯಾತರಾದ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದದವರಿಗೆ ಪಾಕ್ ಸರ್ಕಾರ ಆಹಾರ ಸಾಮಗ್ರಿಗಳನ್ನು ನೀಡುವಾಗ ಧರ್ಮಭೇದ ನೀತಿ ಅನುಸರಿಸುತ್ತಿದೆ. ಅಷ್ಟಲ್ಲದೇ ತಮ್ಮಲ್ಲಿರುವ ಆಹಾರ ಸಾಮಗ್ರಿಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ತಮ್ಮ ಬಳಿ ಈವರೆಗೆ ಕೊರೋನಾ ಸೋಂಕು ಪತ್ತೆ ಆಗಿಲ್ಲ ಎಂದು ಪುಂಗಿ ಊದುವ ಪಾಕಿಸ್ತಾನದಲ್ಲಿ ಈವರೆಗೆ ಕೊರೋನಾ ಸೋಂಕಿತರ ಸಂಖ್ಯೆ 2,000 ದಾಟಿದೆ.
ಪಾಕಿಸ್ತಾನದಲ್ಲೂ ಲಾಕ್ ಡೌನ್ ಹೇರಿರುವ ಕಾರಣ ಜನರ ಆದಾಯದ ಮೂಲವೇ ಸ್ಥಗಿತವಾಗಿದೆ. ಹೆಚ್ಚಿನ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಇರುವ ಜನಸಂಖ್ಯೆಯ ಶೇ. 4ರಷ್ಟು ಇರುವ ಹಿಂದೂ ಧರ್ಮದವರಿಗೆ ಸಮರ್ಪಕವಾದ ಆಹಾರ ಸಾಮಗ್ರಿಗಳನ್ನು ಒದಗಿಸಲಾಗದ ಪಾಕ್ ಸರ್ಕಾರ ತನ್ನ ಕುತಂತ್ರಿ ಬುದ್ದಿಯನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.

- Advertisement -
spot_img

Latest News

error: Content is protected !!