Sunday, August 30, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬಂದಾರು ನಿವಾಸಿ 9ನೇ ತರಗತಿ ಬಾಲಕ ನೇಣುಬಿಗಿದು ಆತ್ಮಹತ್ಯೆ

ಬೆಳ್ತಂಗಡಿ : ಬಂದಾರು ನಿವಾಸಿ 9ನೇ ತರಗತಿ ಬಾಲಕ ನೇಣುಬಿಗಿದು ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ ಭರತ್‌ ಗೌಡ ಅವರ ಪುತ್ರ ಶ್ರವಣ್ ಬಿ.ಕೆ (14ವ) ಎಂಬಾತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆ.30ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಬಾಲಕ ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ವಾಣಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದು. ಆ.29 ರಂದು ಶಾಲೆಯಲ್ಲಿ ಪೋಷಕರ ಸಭೆ ವೇಳೆ ಕಡಿಮೆ ಮಾರ್ಕ್ ಬಂದಿರುವ ಬಗ್ಗೆ ಶಿಕ್ಷಕರು ಪೋಷಕರಿಗೆ ತಿಳಿಸಿದ್ದರಿಂದ ನೊಂದುಕೊಂಡಿದ್ದ ಬಳಿಕ ಅಂದೆ ಸಂಜೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕ ಆ.30 ರಂದು ಮನೆಯ ಮೇಲ್ಚಾವಣಿಯ ಕೊಣೆಯಲ್ಲಿ ವೇಲ್ ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಮತ್ತು ಸಹೋದರಿ, ಬಂಧು ಬಳಗವನ್ನು ಅಗಲಿದ್ದಾರೆ.ಧರ್ಮಸ್ಥಳ ಪೋಲಿಸ್ ಠಾಣೆಯ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!