- Advertisement -
- Advertisement -
ಮೈಸೂರು: ಸ್ಯಾಂಡಲ್ವುಡ್ ಹಾಸ್ಯನಟ ಚಿಕ್ಕಣ್ಣ ಅವರು ಮಂಡ್ಯ ಮೂಲದ ಪಾವನಾ ಅವರೊಂದಿಗೆ ಇಂದು (ಆ. 30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗೆ 10:45ರಿಂದ 11:25ರ ಶುಭ ಮುಹೂರ್ತದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮಾಂಗಲ್ಯಧಾರಣೆ ನೆರವೇರಿತು.
ಶನಿವಾರ ಸಂಜೆ ನಡೆದ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ನಟರಾದ ಡಾಲಿ ಧನಂಜಯ್, ಶ್ರೀಮುರಳಿ, ರಂಗಾಯಣ ರಘು, ತಾರಾ ಅನುರಾಧ, ಮೇಘನಾ ಗಾಂವ್ಕರ್ ಸೇರಿದಂತೆ ಹಲವು ಸಿನಿ ತಾರೆಯರು ಭಾಗವಹಿಸಿ ಶುಭ ಹಾರೈಸಿದ್ದರು. ಕನ್ನಡಿಗರನ್ನು ನಗಿಸುತ್ತಾ ಜನಪ್ರಿಯತೆ ಗಳಿಸಿರುವ ಚಿಕ್ಕಣ್ಣ ಅವರ ಹೊಸ ಬಾಳಿನ ಪಯಣಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
- Advertisement -


