Tuesday, September 17, 2024
HomeUncategorizedಲಾಕ್​ಡೌನ್​ ಸಂದರ್ಭದಲ್ಲಿ ಮಗು ಹುಟ್ಟಿದ ಮಗುವಿನ ಹೆಸರು ಏನು ಗೊತ್ತೇ?

ಲಾಕ್​ಡೌನ್​ ಸಂದರ್ಭದಲ್ಲಿ ಮಗು ಹುಟ್ಟಿದ ಮಗುವಿನ ಹೆಸರು ಏನು ಗೊತ್ತೇ?

spot_img
- Advertisement -
- Advertisement -

ಕರೊನಾ ವೈರಸ್​ನಿಂದ ಜನರನ್ನು ರಕ್ಷಣೆ ಮಾಡುವ ಸಲುವಾಗಿ ಇಡೀ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಇಲ್ಲಿಯವರೆಗೆ ಭಾರತ ದೇಶ ಇಂತಹ ಸ್ವಯಂ ದಿಗ್ಬಂಧನ ಹಾಕಿಕೊಂಡು ಕೂರಿರುವುದನ್ನು ಯಾರು ಕಂಡಿಲ್ಲ. ಭಾರತದ ಪಾಲಿಗೆ ಈ ದಿನಗಳು ಇತಿಹಾಸದ ಪುಟಗಳಲ್ಲಿ ಇರುವಂತಹದು. ಆದರೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದ ಒಂದು ಮನೆಯಲ್ಲಿ ಲಾಕ್​ಡೌನ್ ಎಂಬ ಹೆಸರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಕಾರ್ಡ್ ನಲ್ಲೂ ಪ್ರಿಂಟ್ ಆಗಲಿದೆ.

ಹೌದು, ಖುಖುಂಡು ಗ್ರಾಮದಲ್ಲಿ ಇಂದು ಜನಿಸಿದ ಗಂಡುಮಗುವಿಗೆ ಅದರ ತಂದೆ ತಾಯಿ ‘ಲಾಕ್​ಡೌನ್​’ ಎಂದೇ ಹೆಸರಿಟ್ಟಿದ್ದಾರೆ. ಲಾಕ್​​ಡೌನ್​ ಎಂದು ಹೆಸರಿಟ್ಟ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಪವನ್​, ಕರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಲಾಕ್​ಡೌನ್​ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ದೇಶದ ಹಿತಾಸಕ್ತಿಗಾಗಿ ಇದು ಒಳ್ಳೆಯ ಕ್ರಮ. ಹಾಗಾಗಿ ನಮ್ಮ ಮಗುವಿಗೂ ಲಾಕ್​ಡೌನ್​ ಎಂದೇ ಹೆಸರಿಟ್ಟಿದ್ದೇವೆ. ಈ ಮೂಲಕ ನಮ್ಮ ಬೆಂಬಲ ಸೂಚಿಸಿದ್ದೇವೆ ಎಂದಿದ್ದಾರೆ.

ಹಾಗೆಯೆ ಕಳೆದ ವಾರ ಗೋರಖ್​ಪುರದಲ್ಲಿ ಹುಟ್ಟಿದ ಹೆಣ್ಣುಮಗುವಿಗೆ ಕರೊನಾ ಎಂದು ಹೆಸರಿಡಲಾಗಿದೆ.

- Advertisement -
spot_img

Latest News

error: Content is protected !!