Friday, April 26, 2024
Homeಕರಾವಳಿರೋಟರಿ ಕ್ಲಬ್ ಹಾಗೂ ಆ್ಯನ್ಸ್ ಕ್ಲಬ್ ನಿಂದ ಬೆಳ್ತಂಗಡಿಯ ವೈದ್ಯರಿಗೆ ಪಿಪಿಇ ಕಿಟ್ ವಿತರಣೆ

ರೋಟರಿ ಕ್ಲಬ್ ಹಾಗೂ ಆ್ಯನ್ಸ್ ಕ್ಲಬ್ ನಿಂದ ಬೆಳ್ತಂಗಡಿಯ ವೈದ್ಯರಿಗೆ ಪಿಪಿಇ ಕಿಟ್ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ಕೊರೊನ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಕರ್ತವ್ಯ ನಿರ್ವಹಿಸುವ ವೈದ್ಯರುಗಳು ಹಾಗೂ ಸಿಬಂದಿಗಳ ಸ್ವ ಸುರಕ್ಷತೆಗಾಗಿ ರೋಟರಿ ಕ್ಲಬ್ ಹಾಗೂ ಆ್ಯನ್ಸ್ ಕ್ಲಬ್ ವತಿಯಿಂದ (ಪಿಪಿಇ) ಕಿಟ್ ನ್ನು ಇಂದು ಆಸ್ಪತ್ರೆ ಆವರಣಲ್ಲಿ ವಿತರಿಸಲಾಯಿತು.

ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಅವರಿಗೆ ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ನಿಯೋಜಿತ ಅಧ್ಯಕ್ಷ ವಕೀಲ ಬಿ.ಕೆ. ಧನಂಜಯ ರಾವ್, ಈಗಾಗಲೇ ರೋಟರಿ ಸಂಸ್ಥೆಯ ವತಿಯಿಂದ 50 ಪಿಪಿಇ ಕಿಟ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳ್ತಂಗಡಿ ರೋಟರಿ ಘಟಕದ ಸದಸ್ಯೆ ಮನೋರಮಾ ಭಟ್ ಅವರ ಪುತ್ರಿ ಹಾಂಗ್ ಕಾಂಗ್ ನಲ್ಲಿರುವ ಅನ್ವಿತಾ ಅವರು ಕಿಟ್ ಗಳ ಪ್ರಾಯೋಜಕರಾಗಿದ್ದಾರೆ. ಆಧ್ಯತೆ ಮೇರೆಗೆ ಅವಶ್ಯಕತೆ ಇದ್ದಲ್ಲಿ ಇನ್ನಷ್ಟು ಕಿಟ್ ಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮುಂಬರುವ ದಿನಗಳಲ್ಲಿ ರೋಟರಿ ನಿಯೋಜಿತ ಕಾರ್ಯದರ್ಶಿ ಶ್ರೀಧರ ಅವರು ತಾಲೂಕಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟರಿ ಇನ್ನಿತರ ಕಿಟ್ ವಿತರಿಸಲಿದ್ದಾರೆ. ಆ್ಯನ್ಸ್ ಕ್ಲಬ್ ನೀಡಿದ ಬಟ್ಟೆಯಿಂದ ಮಾಸ್ಕ್ ಗಳನ್ನು ತಯಾರಿಸಿದ ಲಾಯಿಲದ ಟೈಲರ್ ರಮೇಶ ಬಂಗೇರ ಅವರು ಆಸ್ಪತ್ರೆಗೆ ಮಾಸ್ಕ್ ಹಸ್ತಾಂತರಿಸಿದರು. ಕಿಟ್ ಗಳನ್ನು ಹಾಗೂ ಮಾಸ್ಕ್ ಗಳನ್ನು ನೀಡಿದ ಸಂಸ್ಥೆಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ರೋಟರಿ ಅಧ್ಯಕ್ಷ ಜಯರಾಮ್, ನಿಯೋಜಿತ ಕಾರ್ಯದರ್ಶಿ ಶ್ರೀಧರ್, ಸದಸ್ಯರಾದ ಪಿತಾಂಬರ ಹೆರಾಜೆ, ಮನೋರಮಾ ಭಟ್, ರಾಜಶ್ರೀ ಡಿ.ರಾವ್, ಡಾ.ದೀಪಾಲಿ ಡೋಂಗ್ರೆ, ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಕಾಂತ್, ಡಾ.ತಾರಕೇಸರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!