Sunday, June 7, 2026
Homeಕರಾವಳಿಮುತ್ತೂಟ್ ಫೈನಾನ್ಸ್ ಬೆಳ್ಳಾರೆ ಶಾಖೆ ವತಿಯಿಂದ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಚೆಕ್ ಹಸ್ತಾಂತರ

ಮುತ್ತೂಟ್ ಫೈನಾನ್ಸ್ ಬೆಳ್ಳಾರೆ ಶಾಖೆ ವತಿಯಿಂದ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಚೆಕ್ ಹಸ್ತಾಂತರ

- Advertisement -
- Advertisement -

ಬೆಳ್ಳಾರೆ: ಕೆಳ ದಿನಗಳ ಹಿಂದೆ ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪಟ್ಟೆ ನಿವಾಸಿ ಕೂಲಿ ಕಾರ್ಮಿಕ ಬಾಜಿಲ್ ಡಿ’ ಸೋಜಾರವರ ಪುತ್ರ ಲಾರೆನ್ಸ್ ಡಿ’ ಸೋಜಾರವರು ಮಲಗಿದ್ದಲ್ಲೆ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸಾ ವೆಚ್ಚಕ್ಕಾಗಿ ಮುತ್ತೂಟ್ ಎಂ.ಜಾರ್ಜ್ ಪೌಂಡೇಶನ್ ಬೆಳ್ಳಾರೆ ಶಾಖೆ ವತಿಯಿಂದ ರೂ.25,000 ಚೆಕ್ಕನ್ನು ಕ್ಲಸ್ಟರ್ ಮೆನೇಜರ್ ಸಂದೇಶ್ ಶೆಣೈ ಜು.9 ರಂದು ಹಸ್ತಾಂತರಿಸಿದರು.ಅಲ್ಲದೆ ತಿಂಗಳಿಗೆ ಒಂದು ಸಾವಿರದಂತೆ ಒಂದು ವರ್ಷಕ್ಕೆ 12 ಸಾವಿರ ಒಟ್ಟು 37,000 ಮೊತ್ತವನ್ನು ನೀಡಲು ತೀರ್ಮಾನಿಸಲಾಯಿತು.
ಬೆಳ್ಳಾರೆ ಶಾಖೆ ಮೆನೇಜರ್ ಪ್ರತಿಮಾ, ಸುಳ್ಯ ಮೆನೇಜರ್ ತೇಜಸ್, ಸಿಬ್ಬಂದಿಗಳಾದ ಸತ್ಯನಾರಾಯಣ ನಿಡ್ಪಳ್ಳಿ, ವಿನಯ ಉಪಸ್ಥಿತರಿದ್ದರು. ಲಾರೆನ್ಸ್ ಡಿ’ ಸೋಜಾರವರ ಸಹೋದರರಾದ ಸುನೀಲ್ ಡಿ’ ಸೋಜಾ ಹಾಗೂ ಪ್ರಸಾದ್ ಡಿ’ ಸೋಜಾರವರಿಗೆ ಚೆಕ್ ಹಸ್ತಾಂತರ ಮಾಡಲಾಯಿತು

- Advertisement -

Latest News

error: Content is protected !!