Sunday, June 7, 2026
Homeಕರಾವಳಿದಕ್ಷಿಣ ಕನ್ನಡದಲ್ಲಿಂದು ಕೊರೊನಾಗೆ 80 ವರ್ಷದ ಬಂಟ್ವಾಳದ ವೃದ್ಧ ಬಲಿ

ದಕ್ಷಿಣ ಕನ್ನಡದಲ್ಲಿಂದು ಕೊರೊನಾಗೆ 80 ವರ್ಷದ ಬಂಟ್ವಾಳದ ವೃದ್ಧ ಬಲಿ

- Advertisement -
- Advertisement -

ಬಂಟ್ವಾಳ : ದಕ್ಷಿಣಕನ್ನಡದಲ್ಲಿ ಕೊರೊನಾ ಮತ್ತೆ ತನ್ನ ಮರಣ ಮೃದಂಗ ಬಾರಿಸಿದೆ. ಕೋವಿಡ್-19 ಗೆ ಇಂದು ಬಂಟ್ವಾಳದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ  ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ ಸೋಂಕು ದೃಢಪಟ್ಟು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುದು ಗ್ರಾಮದ ಮಾರಿಪಳ್ಳದ 85ರ ವೃದ್ಧ ಇಂದು ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿತ್ತು.

ಕೋವಿಡ್-19 ಸೋಂಕು ಬಂಟ್ವಾಳ ತಾಲೂಕಿನಲ್ಲಿ ಇದುವರೆಗೆ ಆರು ಜನರನ್ನು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

- Advertisement -

Latest News

error: Content is protected !!