Sunday, June 7, 2026
Homeತಾಜಾ ಸುದ್ದಿ3 ತಿಂಗಳಿನಿಂದ ಕೊರೊನ ವಾರಿಯರ್ ಆಗಿ ಉಚಿತ ಸೇವೆ ಸಲ್ಲಿಸಿದ ಸಿನಿಮಾ ನಟಿ

3 ತಿಂಗಳಿನಿಂದ ಕೊರೊನ ವಾರಿಯರ್ ಆಗಿ ಉಚಿತ ಸೇವೆ ಸಲ್ಲಿಸಿದ ಸಿನಿಮಾ ನಟಿ

- Advertisement -
- Advertisement -

ಮುಂಬೈ: ಮಾರಕ ಕೊರೊನ ವಿರುದ್ಧ ಹೋರಾಟದಲ್ಲಿ ದೇಶಾದ್ಯಂತ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರಿಗೆ ಬಾಲಿವುಡ್ ಸಿನಿಮಾ ನಟಿಯೂ ಸಾಥ್ ನೀಡಿದ್ದಾರೆ.
ಶಾರೂಖ್ ಖಾನ್ ಜೊತೆ ಚಿತ್ರದಲ್ಲಿ ನಟಿಸಿದ್ದ ಶಿಖಾ ಮಲ್ಹೋತ್ರಾ ಮುಂಬೈನ ಬಿಎಂಸಿ ಆಸ್ಪತ್ರೆಯಲ್ಲಿ ರೋಗಿಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟಿಯ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು,ಶಿಖಾ ಮಲ್ಹೋತ್ರಾ ನರ್ಸಿಂಗ್‌ನಲ್ಲಿ ಪದವೀಧರೆ. ಸಿನಿಮಾ ಮೇಲಿನ ಆಸಕ್ತಿಯಿಂದ ಬಾಲಿವುಡ್ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೃತ್ತಿಪರತೆ ಮೆರೆದ ನಟಿ ಮತ್ತೆ ಆಸ್ಪತ್ರೆಗೆ ಸೇರಿ ಕೊವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

- Advertisement -

Latest News

error: Content is protected !!