Saturday, June 6, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 2798 ಪಾಸಿಟವ್ ಕೇಸುಗಳು, 70 ಮಂದಿ ಕೊರೊನಾಗೆ ಬಲಿ, ಬೆಂಗಳೂರಿನಲ್ಲಿ 1533 ಮಂದಿಗೆ...

ರಾಜ್ಯದಲ್ಲಿಂದು 2798 ಪಾಸಿಟವ್ ಕೇಸುಗಳು, 70 ಮಂದಿ ಕೊರೊನಾಗೆ ಬಲಿ, ಬೆಂಗಳೂರಿನಲ್ಲಿ 1533 ಮಂದಿಗೆ ಕೋವಿಡ್-19

- Advertisement -
- Advertisement -

ಬೆಂಗಳೂರು : ನಿರೀಕ್ಷೆಗೆ ಮೀರಿ ಕೊರೊನಾ ಆರ್ಭಟಿಸುತ್ತಿದೆ. ರಾಜ್ಯದಲ್ಲಿ ತನ್ನನ್ನು ಹಿಡಿಯುವವರೇ ಎಲ್ಲ ಎಂಬಂತೆ ಅಬ್ಬರಿಸುತ್ತಿದೆ. ಇನ್ನು ಇಂದು ರಾಜ್ಯದಲ್ಲಿ ಬರೋಬ್ಬರಿ 2798 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಅದರಲ್ಲಿ ಬೆಂಗಳೂರು ಒಂದರಲ್ಲೇ 1533 ಮಂದಿಗೆ ಕೋವಿಡ್-19 ಇರೋದು ದೃಢವಾಗಿದೆ.

ರಾಜ್ಯದಲ್ಲಿ 70 ಮಂದಿಯನ್ನು ಕೊರೊನಾ ಇಂದು ಬಲಿ ಪಡೆದುಕೊಂಡಿದೆ. ಬೆಂಗಳೂರು ಒಂದರಲ್ಲೇ ಕೊರೊನಾದಿಂದ 23 ಮಂದಿ ಇವತ್ತು ಸಾವನ್ನಪ್ಪಿದ್ದಾರೆ. 882 ಮಂದಿ ಇವತ್ತು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲೇ 404 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!