Friday, June 27, 2025
Homeಇತರಡಿಫೆರೆಂಟ್ ಹೇರ್ ಸ್ಟೈಲ್ ಮೂಲಕ ಮಿಂಚ್ತಿದೆ ಈ ಸುಂದರಿ ಆನೆ.. ಸಾಮಾಜಿಕ ಜಾಲತಾಣಗಳಲ್ಲೀಗ “ಬಾಬ್ ಕಟ್...

ಡಿಫೆರೆಂಟ್ ಹೇರ್ ಸ್ಟೈಲ್ ಮೂಲಕ ಮಿಂಚ್ತಿದೆ ಈ ಸುಂದರಿ ಆನೆ.. ಸಾಮಾಜಿಕ ಜಾಲತಾಣಗಳಲ್ಲೀಗ “ಬಾಬ್ ಕಟ್ ಸೆಂಗಮಾಲಂ”ದೇ ಹವಾ…

spot_img
- Advertisement -
- Advertisement -

ತಮಿಳುನಾಡು : ತಮಿಳುನಾಡಿನ ಆನೆಯೊಂದು ತನ್ನ ವಿಭಿನ್ನ ಹೇರ್ ಸ್ಟೈಲ್ ನಿಂದ ಸಖತ್ ಫೇಮಸ್ ಆಗಿದೆ. ಈ ಆನೆ ಸಾವಿರಾರು ಅಭಿಮಾನಿಗಳನ್ನೂ ಹೊಂದಿದೆ. ಹೌದು ಸದ್ಯ ಈ ಕ್ಯೂಟ್ ಆನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ.

ಬಾಬ್‍ಕಟ್ ಎಂಬುದು ಹುಡುಗಿಯರ ಅಚ್ಚುಮೆಚ್ಚಿನ ಹೇರ್ ಸ್ಟೈಲ್, ಆನೆ ಎಂದಾದ್ರೂ ಬಾಬ್‍ಕಟ್ ಮಾಡಿಸಿಕೊಂಡಿದ್ದನ್ನು ನೋಡಿದ್ದೀರಾ? ತಮಿಳುನಾಡಿನ ಮನ್ನಾರ್ ಗುಡಿಯ ರಾಜ ಗೋಪಾಲಸ್ವಾಮಿ ದೇವಾಲಯದಲ್ಲಿ ಆನೆಯೊಂದು ತನ್ನ ಕೇಶ ಶೈಲಿಯಿಂದಲೇ ಭಾರೀ ಫೇಮಸ್ ಆಗಿದೆ. ‘ಸೆಂಗಮಾಲಂ’ ಹೆಸರಿನ ಈ ಆನೆ ತನ್ನ ವಿಶಿಷ್ಟ ಬಾಬ್‍ಕಟ್ ನಿಂದಲೇ ಸುದ್ದಿಯಾಗಿದೆ. ಹೀಗಾಗಿ ಜನರು ಪ್ರೀತಿಯಿಂದ ಈ ಆನೆಯನ್ನು ಬಾಬ್‍ಕಟ್ ಸೆಂಗಮಾಲಂ ಎಂದು ಕರೆಯುತ್ತಾರೆ. ನೋಡಲು ಮುದ್ದಾಗಿರುವ ಈ ಆನೆ ಸಾವಿರಾರು ಅಭಿಮಾನಿಗಳನ್ನು ಹೊಂದಿದೆ.

ಇನ್ನು ಐಎಫ್‍ಎಸ್ ಅಧಿಕಾರಿ ಸುಧಾ ರಾಮನ್ ತಮ್ಮಟ್ವಿಟರ್ ಖಾತೆಯಲ್ಲಿ ಸೆಂಗಮಾಲಂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮತ್ತೆ ಸೆಂಗಮಾಲಂ ಸೋಶಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡಿದ್ದಾಳೆ. ಇವಳು ಬಹಳ ಸಾಧು, ಶಾಂತ ಹಾಗೂ ಸ್ನೇಹಮಯಿ. ಹೀಗಾಗಿ, ಈ ಹೇರ್ ಸ್ಟೈಲ್ ಹಾಗೂ ಸಿಂಗಾರ ಮಾಡಲು ಸಾಧ್ಯವಾಗುತ್ತೆ ಎಂದು ಆನೆಯ ಮಾವುತ ಹೇಳಿದ್ದಾರೆ.

- Advertisement -
spot_img

Latest News

error: Content is protected !!