Sunday, June 7, 2026
Homeಇತರಕೊಡಗಿನಲ್ಲಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳನ್ನು ಬಂದ್ ಮಾಡುವಂತೆ ಡಿಸಿ ಆದೇಶ

ಕೊಡಗಿನಲ್ಲಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳನ್ನು ಬಂದ್ ಮಾಡುವಂತೆ ಡಿಸಿ ಆದೇಶ

- Advertisement -
- Advertisement -

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯ ಎಲ್ಲಾ ರೆಸಾರ್ಟ್, ವಸತಿ ಗೃಹ, ಮತ್ತು ಹೋಂ ಸ್ಟೇ ಗಳನ್ನು ಜುಲೈ 7 ರಿಂದ ಅನ್ವಯ ಆಗುವಂತೆ  ಅಂದರೆ ಇಂದಿನಿಂದ ಬಂದ್ ಮಾಡುವಂತೆ ಕೊಡಗು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ

ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. ಈಗಾಗಲೇ ಪ್ರವಾಸಿಗರು ತಂಗಿದ್ದರೆ ಅವಧಿ ಮುಗಿದ ಕೂಡಲೇ ಅವರನ್ನು ಜಿಲ್ಲೆಯಿಂದ ಕಳುಹಿಸಬೇಕು. ಯಾವುದೇ ಪ್ರವಾಸಿಗರ ಮುಂಗಡ ಬುಕ್ಕಿಂಗ್ ಪಡೆದಿದ್ದರೆ ಅದನ್ನು ಹಣ ಮರುಪಾವತಿಸಿ ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.ಇನ್ನು ಮೊನ್ನೆಯಷ್ಟೇ ಹಾಸನ ಜಿಲ್ಲಾಧಿಕಾರಿಗಳು ಕೂಡ ಹಾಸನದಲ್ಲಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳನ್ನು ಬಂದ್ ಮಾಡುವಂತೆ ಆದೇಶ ನೀಡಿದ್ದರು.

- Advertisement -

Latest News

error: Content is protected !!