- Advertisement -
- Advertisement -
ಚೆನ್ನಾಗಿ ನಿದ್ರೆ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಸುಖ ನಿದ್ರೆಯಿಲ್ಲದೆ ಪರಿತಪಿಸುವವರು ಸಾಕಷ್ಟು ಮಂದಿ. ಶಾಂತ ಪ್ರದೇಶ, ಸುಂದರ ಹಾಸಿಗೆಯಿದ್ದರೂ ಅನೇಕ ಬಾರಿ ಸುಖ ನಿದ್ರೆ ಹತ್ತಿರ ಸುಳಿಯೋದಿಲ್ಲ. ಇದಕ್ಕೆ ವಾಸ್ತುದೋಷವೂ ಕಾರಣವಾಗುತ್ತದೆ. ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.
- ಒಂಟಿ ಮನೆಯಲ್ಲಿ ಒಬ್ಬರೇ ನಿದ್ರೆ ಮಾಡಬಾರದು. ದೇವಸ್ಥಾನ ಹಾಗೂ ಚಿತಾಗಾರದಲ್ಲಿ ಕೂಡ ನಿದ್ರೆ ಮಾಡಬಾರದು.
- ನಿದ್ರೆ ಮಾಡಿದ ವ್ಯಕ್ತಿಯನ್ನು ಅಚಾನಕ್ಕಾಗಿ ಏಳಿಸಬಾರದು.
- ವಿದ್ಯಾರ್ಥಿಗಳು, ಉದ್ಯೋಗಿಗಳು, ದ್ವಾರಪಾಲಕರು ತುಂಬಾ ಹೊತ್ತು ಮಲಗಬಾರದು.
- ಗಾಢ ಕತ್ತಲಿರುವ ಕೋಣೆಯಲ್ಲಿ ಮಲಗಬಾರದು.
- ಒದ್ದೆ ಕಾಲಿನಲ್ಲಿ ಹಾಸಿಗೆ ಮೇಲೆ ಮಲಗಬಾರದು. ಒಣಗಿದ ಕಾಲಿನಲ್ಲಿ ಮಲಗಬೇಕು. ಇಲ್ಲವಾದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.
- ಹರಿದ ಹಾಸಿಗೆಯಲ್ಲಿ ಮಲಗಬಾರದು.
- ನಗ್ನವಾಗಿ ಎಂದೂ ನಿದ್ರೆ ಮಾಡಬಾರದು.
- ಹಗಲಿನಲ್ಲಿ ಮಲಗಬಾರದು. ಜೇಷ್ಠ ಮಾಸದಲ್ಲಿ ಮಧ್ಯಾಹ್ನ ಕೊಂಚ ಹೊತ್ತು ಮಲಗಬಹುದು.
- ಸೂರ್ಯಾಸ್ತವಾದ ಮೂರು ಗಂಟೆ ನಂತ್ರ ಮಲಗಬೇಕು.
- ಎಡ ಭಾಗಕ್ಕೆ ವಾಲಿ ಮಲಗುವುದು ಶುಭಕರ.
- ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಅಶುಭ.
- ಮಲಗಿ ಓದಬಾರದು.
- ತಿಲಕವಿಟ್ಟು ಮಲಗುವುದು ಅಶುಭ. ಹಾಗಾಗಿ ಮಲಗುವ ಮುನ್ನ ತಿಲಕವನ್ನು ತೆಗೆಯಬೇಕು.
- Advertisement -