- Advertisement -
- Advertisement -
ಬೆಳ್ಳಾರೆ: ಕೊರೊನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಳೆದ ಎರಡು ವಾರಗಳಿಂದ ದೇಶಾದ್ಯಂತ ಮದ್ಯದಂಗಡಿಗಳು ಬಂದಾಗಿದೆ. ಈ ನಡುವೆ ಗೇರು ಹಣ್ಣಿನ ಸಾರಾಯಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಾರೆ ಕಲ್ಲೋಣಿಯ ಜನಾರ್ದನ ತಮ್ಮ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಲು ಮುಂದಾದ ವ್ಯಕ್ತಿ. ಈತನಿಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಗೇರು ಹಣ್ಣಿನ ರಸ, ಗೇರುಬೀಜದ ಸಾರಾಯಿ ಮತ್ತು ಅದಕ್ಕೆ ಸಂಬಂಧಿಸಿದ ಪಾತ್ರೆಗಳನ್ನು ಶುಕ್ರವಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಮಾಹಿತಿಯ ಮೇರೆಗೆ ಸುಳ್ಯದ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ರಾಧಾ ಎಸ್.ಪಿ. ನೇತೃತ್ವದ ತಂಡ ಈ ದಾಳಿ ನಡೆಸಿದೆ.
- Advertisement -