Friday, June 5, 2026
Homeಮನರಂಜನೆಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯ ಆರೋಗ್ಯ ಸ್ಥಿತಿ ಗಂಭೀರ

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯ ಆರೋಗ್ಯ ಸ್ಥಿತಿ ಗಂಭೀರ

- Advertisement -
- Advertisement -

ಚೆನ್ನೈ: ಮಹಾಮಾರಿ ಕೊರೋನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ.

ಆಗಸ್ಟ್ 5ರಿಂದ 74 ವರ್ಷದ ಎಸ್‍ಪಿಬಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ರಾತ್ರಿ ಅವರು ಆರೋಗ್ಯ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಲೈಫ್ ಸಪೋರ್ಟ್ ಅಳವಡಿಸಲಾಗಿದೆ.

ಈ ಹಿಂದೆ ಕೊರೋನಾಗೆ ತುತ್ತಾಗಿದ್ದಾಗ ಅವರು ವಿಡಿಯೋ ಮಾಡಿ ನನ್ನ ಕುಟುಂಬದ ಹಿತದೃಷ್ಟಿಯಿಂದ ನಾನು ಸ್ವಯಂ ಆಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದರು.

- Advertisement -

Latest News

error: Content is protected !!