Friday, May 3, 2024
Homeಕರಾವಳಿಬೆಳ್ತಂಗಡಿ: ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಶೇಂದಿ ತಾಣಗಳಿಗೆ ಅಬಕಾರಿ ಇಲಾಖೆಯಿಂದ ಸಾಮೂಹಿಕ ದಾಳಿ

ಬೆಳ್ತಂಗಡಿ: ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಶೇಂದಿ ತಾಣಗಳಿಗೆ ಅಬಕಾರಿ ಇಲಾಖೆಯಿಂದ ಸಾಮೂಹಿಕ ದಾಳಿ

spot_img
- Advertisement -
- Advertisement -

ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ, ಪೆರ್ಲ, ಅರಸಿನಮಕ್ಕಿ ಭಾಗದಲ್ಲಿ ಕಳ್ಳಬಟ್ಟಿ ಸಾರಾಯಿ ಮತ್ತು ರಸಾಯನ ಮಿಶ್ರಿತ ಶೇಂದಿ ಮಾರಾಟದ ಕುರಿತು ಸಾರ್ವಜನಿಕರ ದೂರು ನೀಡಿದ ಹಿನ್ನಲೆಯಲ್ಲಿ ಶಿಬಾಜೆ ಗ್ರಾಮದ ಹಲವು ಕಡೆ ಅಬಕಾರಿ ಇಲಾಖೆಯಿಂದ ಏಕಕಾಲಕ್ಕೆ ದಾಳಿ ನಡೆಸಿದ ಘಟನೆ ನಡೆದಿದೆ.

ಮಂಗಳೂರು ವಿಭಾಗದ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕರು, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ತಂಡ, ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕರು, ಬೆಳ್ತಂಗಡಿ ವಲಯದ ಅಬಕಾರಿ ನೀರೀಕ್ಷಕರು ಹಾಗೂ ತಂಡದೊಂದಿಗೆ ಶಿಬಾಜೆ ಗ್ರಾಮದಲ್ಲಿ ಸಂಶಯಾಸ್ಪದ ಕಳ್ಳಬಟ್ಟಿ ಸಾರಾಯಿ ಹಾಗೂ ಅಕ್ರಮ ಶೇಂದಿ ಅಂಗಡಿಗಳ ಮೇಲೆ ಸಾಮೂಹಿಕ ದಾಳಿ ನಡೆಸಲಾಯಿತು.

ಹಾಗೆಯೆ ಈ ಭಾಗದ ಜನತೆ ಹೆಚ್ಚು ದೂರು ನೀಡುತ್ತಿದ್ದ ಮತ್ತು ಹಲವು ಬಾರಿ ಅಕ್ರಮ ಸಾರಾಯಿ ದಂಧೆ ನಡೆಸಿ ಬಂಧಿತನಾಗಿದ್ದ ಬರಮೇಲೂ ನಿವಾಸಿ ವರ್ಗೀಸ್ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದರೆ ದಾಳಿ ನಡೆಸಿದ ಸಮಯದಲ್ಲಿ ಅವರ ಮನೆಯಲ್ಲಾಗಲಿ ಅಥವಾ ತೋಟದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸುವುತ್ತಿರುವುದು ಕಂಡು ಬಂದಿಲ್ಲ. ಹಾಗೆಯೆ ಮುಂದೆ ಕೂಡ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸಬಾರದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಶಿಬಾಜೆ ಗ್ರಾಮದ ಅರಂಪಾಡಿಯ ವಾಸು ಮಾಲೀಕತ್ವದ ಶೇಂದಿ ಅಂಗಡಿಯಲ್ಲಿ ಶೇಂದಿಗೆ ಸಿಎಚ್ ಎಲ್ ಮಿಶ್ರಿತ ಶೇಂದಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ದಾಳಿ ನಡೆಸಿ ತನಿಖೆ ನಡೆಸಲಾಯಿತು.

ಹತ್ಯಡ್ಕ ಗ್ರಾಮದ ಕುಂಟಾಲಪಲ್ಕೆ ಎಂಬಲ್ಲಿ ಸಿ.ಟಿ ರಾಜು ಎಂಬ ವ್ಯಕ್ತಿ ಅಕ್ರಮ ಮದ್ಯ ಮಾರಾಟ ಕುರಿತು ತನಿಖೆ ನಡೆಸಲಾಗಿದ್ದು. ಆದರೆ ಅಲ್ಲಿ ಯಾವುದೇ ರೀತಿಯ ಅಕ್ರಮ ಕಂಡು ಬಂದಿಲ್ಲ ಎಂದು ಅಬಕಾರಿ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!