Sunday, August 30, 2026
Homeಕರಾವಳಿಮಂಗಳೂರು: ಮಾಜಿ ಡಾನ್ ಎಕ್ಕೂರು ಬಾಬಾ ಕೊರೋನಾಗೆ ಬಲಿ

ಮಂಗಳೂರು: ಮಾಜಿ ಡಾನ್ ಎಕ್ಕೂರು ಬಾಬಾ ಕೊರೋನಾಗೆ ಬಲಿ

- Advertisement -
- Advertisement -

ಮಂಗಳೂರು: ಜಿಲ್ಲೆಯ ಮಾಜಿ ಡಾನ್ ಮತ್ತು ಎಕ್ಕೂರು ನಿವಾಸಿ ಎಕ್ಕೂರು ಬಾಬಾ ಅಲಿಯಾಸ್ ಶುಭಕರ ಶೆಟ್ಟಿ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಕ್ಕುರು ಬಾಬಾ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಒಂದು ವಾರದ ಹಿಂದೆ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಂತರ ಇವರಿಗೆ ಜ್ವರ ಬಂದಿದ್ದು ಅದಕ್ಕಾಗಿ ಮಂಗಳಾ ಆಸ್ಪತ್ರೆಗೆ ಹೋದಾಗ ಅಲ್ಲಿ ಕೊವಿಡ್ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಒಂದು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಎಕ್ಕೂರು ಬಾಬಾರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಸ್ನೇಹಿತರು ಮತ್ತು ಹಿತೈಷಿಗಳು ಮಂಗಳಾ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.

ಮಾಜಿ ರೌಡಿಯಾಗಿದ್ದ ಇವರು ಅಪರಾಧ ಚಟುವಟಿಕೆಗಳಿಗೆ ವಿದಾಯ ಹೇಳಿ ನಂತರ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.

- Advertisement -

Latest News

error: Content is protected !!