Friday, June 26, 2026
Homeತಾಜಾ ಸುದ್ದಿಫಲಿತಾಂಶಕ್ಕೂ ಮುನ್ನ ನಾನು ಸಿಎಂ, ನಾನು ಸಿಎಂ ಅನ್ನೋದು ತಪ್ಪು: ಸಿದ್ದು, ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ...

ಫಲಿತಾಂಶಕ್ಕೂ ಮುನ್ನ ನಾನು ಸಿಎಂ, ನಾನು ಸಿಎಂ ಅನ್ನೋದು ತಪ್ಪು: ಸಿದ್ದು, ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್‌

- Advertisement -
- Advertisement -

ಮೈಸೂರುಚುನಾವಣೆಗೂ ಮುನ್ನ ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್ ನಾಯಕರಲ್ಲಿ ಕಚ್ಚಾಟ ನಡೆಯುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಫಲಿತಾಂಶಕ್ಕೆ ಮುನ್ನ ನಾನು ಸಿಎಂ, ನಾನು ಸಿಎಂ ಎಂದು ಹೇಳೋದು ಸರಿಯಲ್ಲ ಅನ್ನೋದ್ರ ಮೂಲಕ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಸಿಎಂ ಯಾರಾಗಬೇಕು ಎಂಬುದು ಮೈಸೂರಿನಲ್ಲೂ,ಬೆಂಗಳೂರಿನಲ್ಲೂ, ಗುಲ್ಬರ್ಗದಲ್ಲೂ ತೀರ್ಮಾನವಾಗಲ್ಲ, ಅದನ್ನ ಹೈಕಮಾಂಡ್ ತೀರ್ಮಾನಿಸುತ್ತೆ. ಅವತ್ತಿನ ರಾಜಕೀಯ ಪರಿಸ್ಥಿತಿ ಆಧರಿಸಿ ಹೈಕಮಾಂಡ್ ತೀರ್ಮಾನಿಸುತ್ತೆ .ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಹೋಗುವುದು. ಈ ಬಾರಿ, ಆ ಬಾರಿ ಅಂತಲ್ಲ, ನಮ್ಮದು ಯಾವಾಗಲೂ ಸಾಮೂಹಿಕ‌ ನಾಯಕತ್ವ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಅದೇ ನಮ್ಮ ಉದ್ದೇಶ ಎಂದರು. ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರಕ್ಕೆ ಕೂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದರು. ಎಲ್ಲಾ ಸೇರಿ ಚಾನ್ಸ್ ಕೊಟ್ಟರೆ ನೋಡೋಣ. ಜನಸೇವೆಯೇ ತಮಗೆ ಮುಖ್ಯ. ಅಧಿಕಾರಕ್ಕಾಗಿ ಎಂದಿಗೂ ಹಾತೊರೆಯಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!