Thursday, May 16, 2024
Homeಕರಾವಳಿಮಂಗಳೂರು- ಬೆಂಗಳೂರು ನಡುವೆ ವಾರದಲ್ಲಿ ಆಗಸ್ಟ್ 31 ರವರೆಗೆ ಮೂರು ದಿನ ವಿಶೇಷ ರೈಲು ಸಂಚಾರ

ಮಂಗಳೂರು- ಬೆಂಗಳೂರು ನಡುವೆ ವಾರದಲ್ಲಿ ಆಗಸ್ಟ್ 31 ರವರೆಗೆ ಮೂರು ದಿನ ವಿಶೇಷ ರೈಲು ಸಂಚಾರ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ರಾತ್ರಿ ವಿಶೇಷ ರೈಲು ಸಂಚಾರಕ್ಕೆ ರೈಲ್ವೇ ಬೋರ್ಡ್ ಅನುಮೋದನೆ ನೀಡಿದೆ.

ಜುಲೈ 26 ರಿಂದ ಆಗಸ್ಟ್ 31 ರವರೆಗೆ ವಿಶೇಷ ರೈಲು ಸಂಚಾರ ನಡೆಸಲಿದೆ.

ಮಳೆ ಮತ್ತು ಭೂ ಕುಸಿತದಿಂದ ರಸ್ತೆ ಸಂಪರ್ಕ ಸಮಸ್ಯೆ ಇರುವ ಕಾರಣ ಮಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಓಡಿಸುವಂತೆ ರೈಲ್ವೇ ಮಂಡಳಿಗೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿ ಮಾಡಿತ್ತು.

ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ರೈಲು ಬೆಳಗ್ಗೆ 9.05 ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು ಜಂಕ್ಷನ್ ನಿಂದ ರಾತ್ರಿ 6.35 ಕ್ಕೆ ಹೊರಡುವ ರೈಲು ಬೆಳಗ್ಗೆ 6.15ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ.

ಮಂಗಳೂರಿನಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹಾಗೂ ಬೆಂಗಳೂರಿನಿಂದ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ ವಿಶೇಷ ರೈಲು ಸಂಚರಿಸಲಿದೆ.

- Advertisement -
spot_img

Latest News

error: Content is protected !!