Friday, June 5, 2026
Homeಕರಾವಳಿಉಪ್ಪಿನಂಗಡಿ; ವರದಕ್ಷಿಣೆ ತರುವಂತೆ ವಿವಾಹಿತ ಯುವತಿಗೆ ಹಲ್ಲೆ: ಹಲ್ಲೆಗೊಳಗಾದ ಯುವತಿ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ; ವರದಕ್ಷಿಣೆ ತರುವಂತೆ ವಿವಾಹಿತ ಯುವತಿಗೆ ಹಲ್ಲೆ: ಹಲ್ಲೆಗೊಳಗಾದ ಯುವತಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಉಪ್ಪಿನಂಗಡಿ; ಪತಿ ಮತ್ತು ಆತನ ಕುಟುಂಬಸ್ಥರು  ವರದಕ್ಷಿಣೆ ತರುವಂತೆ ಕಿರುಕುಳ‌ ನೀಡಿದ ಹಲ್ಲೆ ಮಾಡಿದ ಪರಿಣಾಮ ಯುವತಿಯೋರ್ವಳು ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ರಾಮಕುಂಜದ ಆತೂರು ಹುಸೇನ್ ಎಂಬವರ ಪುತ್ರಿ ಸೆಮೀಮಾ(28) ಹಲ್ಲೆಗೊಳಗಾದ ಯುವತಿ.

2013ರಲ್ಲಿ ಸೆಮೀಮಾ ವಿವಾಹವು ಹಾಸನದ ಚಿಕ್ಕನನಾಡು ಟಿ.ಎಚ್.ಇಬ್ರಾನ್ ಎಂಬಾತನಿಗೆ ಮದುವೆ  ಮಾಡಿ ಕೊಡಲಾಗಿತ್ತು. ಇಬ್ರಾನ್ ವಧು ನೋಡಲು ಬಂದ ವೇಳೆ, ವರದಕ್ಷಿಣೆ ರಹಿತ. ವಿವಾಹವಾಗುವುದಾಗಿ ನಂಬಿಸಿ ವಿವಾಹವಾಗಿ ಬಳಿಕ ವರದಕ್ಷಿಣೆ ಪಡೆದಿದ್ದರು‌.

ಆ ಬಳಿಕ ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಅದಲ್ಲದೆ ಗಂಡನ ಮನೆಯಿಂದ ತವರು ಮನೆಗೆ ಕಳುಹಿಸಿದ್ದಾರೆ. ಆದರೂ ಕಿರುಕುಳ‌‌ ತಪ್ಪಿಲ್ಲ‌ ಎಂದು‌ ಸಮೀಮಾ ದೂರಿನಲ್ಲಿ‌ ತಿಳಿಸಿದ್ದಾರೆ.

ಇನ್ನು ಸಮೀಮಾ ದಂಪತಿಗೆ 2 ಹೆಣ್ಣು ಮತ್ತು ಒಂದು ಗಂಡು ಮಗುವಿದೆ.

- Advertisement -

Latest News

error: Content is protected !!