Friday, June 5, 2026
Homeತಾಜಾ ಸುದ್ದಿಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ: ನಂತರ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಾರೆ: ಈಶ್ವರಪ್ಪ ಆರೋಪಕ್ಕೆ ಸಿದ್ದರಾಮಯ್ಯ...

ಮೊದಲು ಕಿತಾಪತಿ ಮಾಡೋದು ಬಿಜೆಪಿಯವರೇ: ನಂತರ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಾರೆ: ಈಶ್ವರಪ್ಪ ಆರೋಪಕ್ಕೆ ಸಿದ್ದರಾಮಯ್ಯ ಪ್ರತ್ಯುತ್ತರ

- Advertisement -
- Advertisement -

ಬೆಂಗಳೂರು: ಶಿವಮೊಗ್ಗ ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಕೆ.ಎಸ್ಶ್ವರಪ್ಪ ನೀಡಿದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಹಾಗಾಗಿ ಕಾಂಗ್ರೆಸ್​ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೊದಲು ಕಿತಾಪತಿ ಮಾಡುವವರು ಬಿಜೆಪಿಯವರೇ. ಬಳಿಕ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಾರೆ. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಸಾವರ್ಕರ್​ ಫೋಟೋ ಹಾಕಿದ್ದಾರೆ. ಹೀಗ್ಯಾಕೆ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾರೆ.

ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟು ದೊಡ್ಡ ತಪ್ಪು ಮಾಡಿದರು. ಅತ್ತ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆಹರು ಸ್ಮರಣೆ ಮಾಡುತ್ತಾರೆ. ಆದರೆ ಇವರಿಗೆ ಇತಿಹಾಸವೇ ಸರಿಯಾಗಿ ಗೊತ್ತಿಲ್ಲ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ? ಯಾವ ಹೋರಾಟದಲ್ಲಿ ಅವರು ಭಾಗಿಯಾಗಿದ್ದಾರೆ? ಬಿಜೆಪಿಯವರದ್ದು ನಕಲಿ ದೇಶಭಕ್ತಿ. ಎಂದು ಕೇಳಿದರು.

- Advertisement -

Latest News

error: Content is protected !!