Friday, June 5, 2026
Homeತಾಜಾ ಸುದ್ದಿಸಿದ್ದರಾಮಯ್ಯ ಟ್ವೀಟ್‌ಗೆ ಬಿಜೆಪಿಯಿಂದ ಭಾರೀ ಟೀಕೆ

ಸಿದ್ದರಾಮಯ್ಯ ಟ್ವೀಟ್‌ಗೆ ಬಿಜೆಪಿಯಿಂದ ಭಾರೀ ಟೀಕೆ

- Advertisement -
- Advertisement -

ಬೆಂಗಳೂರು: ಹೆಡ್ಗೆವಾರ್ ಹಾಗೂ ಗೋಲ್ವಾಲ್ಕರ್ ವಿಚಾರದಲ್ಲಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಈಗ ಬಿಜೆಪಿಯಿಂದ ಭಾರೀ ಟೀಕೆಗೆ ಒಳಗಾಗಿದೆ. ಹೆಡ್ಗೆವಾರ್ ಹಾಗೂ ಗೋಲ್ವಾಲ್ಕರ್ 1942 ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷರ ಜೊತೆ ಸೇರಿಕೊಂಡು ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು ಎಂದು ಟ್ವೀಟ್ ನಲ್ಲಿ ಆರೋಪಿಸಿದ್ರು.

ಇದಕ್ಕೆ ತೀವ್ರ ತಿರುಗೇಟು ನೀಡಿರುವ ಬಿಜೆಪಿ, ಹೆಡ್ಗೆವಾರ್ ಅವರು 1940ರಲ್ಲಿ ನಾಗ್ಪುರದಲ್ಲಿ ಮರಣ ಹೊಂದಿದ್ರು.. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಹೋರಾಟದ ವಿರುದ್ಧ ಅವರು ಹೇಗೆ ಸಂಚು ರೂಪಿಸಲು ಸಾಧ್ಯ? ಸಿದ್ದರಾಮಯ್ಯ ನವರ ಬುದ್ದಿಗೆ ಮಂಕು ಕವಿದಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರ ಟ್ವೀಟ್ ಭಾರೀ ಟ್ರೋಲ್ ಗೆ ಒಳಗಾಗುತ್ತಿದೆ.

- Advertisement -

Latest News

error: Content is protected !!