Saturday, June 27, 2026
Homeತಾಜಾ ಸುದ್ದಿ'ಪಿಕ್‌ಅಪ್‌ಗೆಂದು ಬಂದು ನನ್ನನ್ನೇ ಎತ್ತಾಕ್ಕೊಂಡು ಹೋದರು' - ಭಾವಿ ಪತಿಯ ಬಗ್ಗೆ ಶುಭಾ ಪೂಂಜಾ ಮಾತುಗಳು..

‘ಪಿಕ್‌ಅಪ್‌ಗೆಂದು ಬಂದು ನನ್ನನ್ನೇ ಎತ್ತಾಕ್ಕೊಂಡು ಹೋದರು’ – ಭಾವಿ ಪತಿಯ ಬಗ್ಗೆ ಶುಭಾ ಪೂಂಜಾ ಮಾತುಗಳು..

- Advertisement -
- Advertisement -

ಮೊಗ್ಗಿನ ಮನಸ್ಸಿನ ಚಲುವೆ, ಚಂಡನ ಬೆಡಗಿ, ನಟಿ ಶುಭಾ ಪೂಂಜಾ ಅವರು ಮದ್ವೆಯಾಗಲಿದ್ದಾರೆ. ಹೌದು. ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಹಾಗೂ ಬ್ಯೂಸಿನೆಸ್‌ ಆಗಿ ಆಗಿ ಕೆಲಸ ಮಾಡುತ್ತಿರುವ ರು ಮಂಗಳೂರು ಮೂಲದ ಸುಮಂತ್ ಎಂಬ ಹುಡುಗನನ್ನು ಮೊಗ್ಗಿನ ಮನಸ್ಸಿನ ಹುಡುಗಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

ಅಂದ್ಹಾಗೇ ಶುಭಾಪೂಂಜಾ ಮತ್ತು ಸುಮಂತ್​ ನಡುವೆ ಭೇಟಿ, ಪ್ರೀತಿ ಶುರುವಾಗಿದ್ಹೇಗೆ ಅಂದ್ರೆ ಅದು ಕೂಡ ಸಖತ್ ಇಂಟ್ರೆಸ್ಟಿಂಗ್ ಕಹಾನಿ. ಶುಭಾ ಪೂಂಜಾ ಸೆಲೆಬ್ರೆಟಿಯಾಗಿರೋದ್ರಿಂದ ಒಂದಷ್ಟು ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಇನ್ವೈಟ್ ಮಾಡೋದು ಸಹಜ. ಒಮ್ಮೆ ಪೊಲೀಸ್ ಡಿಪಾರ್ಟ್​ಮೆಂಟ್​ನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದಾಗ ಮೊದಲ ಬಾರಿಗೆ ಸುಮಂತ್​ರನ್ನ ನೋಡಿದ್ದಾರೆ. ಆ ನಂತರ ಜಯಕರ್ನಾಟಕ ಸಂಘಟನೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಸ್ವತಃ ಸುಮಂತ್​ ಕರೆ ಮಾಡಿ ಆಹ್ವಾನಿಸಿದ್ದಾರೆ.

ಅಲ್ಲಿಂದ ಸುಮಂತ್​ ಮುಖ ಪರಿಚಯವಾಗಿದೆ. ಆ ನಂತರ ಸುಮಾರು ಮೂನ್ಕಾಲ್ಕು ಕಾರ್ಯಕ್ರಮಗಳಲ್ಲಿ ಭೇಟಿಯಾದ ಇಬ್ಬರೂ ನಂತರ ಸ್ನೇಹಿತರಾಗಿದ್ದಾರೆ. ಅಲ್ಲಿಂದ ಸ್ನೇಹ, ಪ್ರೀತಿಯಾಗಿ. ಇದೀಗ ಈ ಪ್ರೀತಿ ಮದುವೆ ಹಂತಕ್ಕೆ ತಲುಪಿದ್ದು,ಸದ್ಯದಲ್ಲೇ ಅಧೀಕೃತ ಮುದ್ರೆ ಬೀಳಲಿದೆ.

‘ಪ್ರಪೋಸ್ ಬಗ್ಗೆ ಹೇಳುವುದಾದರೆ, ನಾನೇ ಎನ್ನಬಹುದು. ಏಕೆಂದರೆ, ಸುಮಂತ್ ಮಂಗಳೂರಿನವರಾದ್ದರಿಂದ, ಅಮ್ಮನಿಗೆ ತುಂಬ ಇಷ್ಟ ಆಗಿದ್ದರು. ‘ನೀನು ಮಂಗಳೂರಿನ ಕಡೆಯವನನ್ನೇ ಮದುವೆಯಾದರೆ ಒಳ್ಳೆಯದು. ಸುಮಂತ್ ಒಳ್ಳೇ ಹುಡುಗ.. ನೋಡು’ ಎಂದಿದ್ದರು. ನಾನು ಆ ಆಲೋಚನೆಯಲ್ಲಿ ಇರಲಿಲ್ಲ. ಆಗ ನಾನು ಈ ಮಾತನ್ನು ಸುಮಂತ್ ಮುಂದೆ ಪ್ರಸ್ತಾಪಿಸಿದೆ. ಅವನೂ ತುಂಬ ಖುಷಿಯಲ್ಲಿಯೇ ಒಪ್ಪಿಕೊಂಡ. ಎರಡೂ ಮನೆಗಳಲ್ಲಿ ಒಪ್ಪಿಗೆಯೂ ಸಿಕ್ಕಿತು’ ಎಂದು ಪ್ರಪೋಸ್ ಪ್ರಹಸನವನ್ನು ವಿವರಿಸುತ್ತಾರೆ ಶುಭಾ.

- Advertisement -

Latest News

error: Content is protected !!