ಸ್ಯಾಂಡಲ್ ವುಡ್ ನ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನೇರ ಮಾತುಗಳ ಮೂಲಕ ,ಪ್ರೇಕ್ಷಕರ ಮನಗೆದ್ದಿರುವ ಶ್ರದ್ಧಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ. 14ನೇ ವರ್ಷದಲ್ಲಿಯೆ ಸ್ತ್ರೀವಾದಿಯಾದ ಕಥೆಯನ್ನು ಬಹಿರಂಗ ಪಡಿಸಿದ್ದಾರೆ.
ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣದಲ್ಲಿ ಋತುಚಕ್ರದ ಬಗ್ಗೆ ಬೋಲ್ಡ್ ಹೇಳಿಕೆಯೊಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಶ್ರದ್ಧಾ 14ನೇ ವಯಸ್ಸಿನಲ್ಲಿಯೇ ಸ್ತ್ರೀವಾದಿಯಾದ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.
ತಾನು ಮೊದಲ ಬಾರಿಗೆ ಋತುಮತಿಯಾಗಿದ್ದ ಸಮಯದಲ್ಲಿ ಕೌಟುಂಬಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
“ನನಗೆ 14 ವರ್ಷ. ನಾನಂದು ನನ್ನ ಕುಟುಂಬದ ಪೂಜೆಯಲ್ಲಿ ಪಾಲ್ಗೊಂಡಿದ್ದೆ. ಆಗ ನನಗೆ ಮೊದಲ ಬಾರಿಗೆ ಋತುಚಕ್ರ ಪ್ರಾರಂಭವಾಗಿತ್ತು. ನಾನು ನನ್ನ ತಾಯಿಯೊಂದಿಗೆ ಇರಲಿಲ್ಲ, ಹಾಗಾಗಿ ನನ್ನ ಚಿಕ್ಕಮ್ಮನನ್ನು ಈ ಬಗ್ಗೆ ಆತಂಕದಿಂದ ಕೇಳಿದ್ದೆ. (ಏಕೆಂದರೆ ನಾನು ಸ್ಯಾನಿಟರಿ ಪ್ಯಾಡ್ ಧರಿಸಿರಲಿಲ್ಲ) ನಟಿ ಬರೆದುಕೊಂಡಿದ್ದಾರೆ.
“ಆಗ ಅಲ್ಲೇ ಕುಳಿತಿದ್ದ ಇನ್ನೊಬ್ಬ ಒಳ್ಳೆ ಮಹಿಳೆ ನನಗೆ ಹೇಳಿದಳು- ಪರ್ವಗಿಲ್ಲಾ ಚಿನ್ನ, ದೇವರು ಕ್ಷಮಿಸ್ಟಾರೆಮಗು, ದೇವರು ನಿಮ್ಮನ್ನು ಕ್ಷಮಿಸುವನು “(ಋತುಚಕ್ರದ ಅವಧಿಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ) ” ಶ್ರದ್ಧಾ ಶ್ರೀನಾಥ್ ವಿವರಿಸಿದ್ದಾರೆ. ಅಲ್ಲಿಂದಾಚೆಗೆ ಅವರು ಉತ್ತಮ ಸ್ತ್ರೀವಾದಿಯಾಗಿ ಬದಲಾಗಿದ್ದರು. ಋತುಚಕ್ರ ಅಥವಾ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದ್ದರು ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.
ಕನ್ನಡದ ‘ಯು ಟರ್ನ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದ ಶ್ರದ್ಧಾ ಶ್ರೀನಾಥ್, ನಂತರ ತೆಲುಗು-ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲಿಯೂ ಒಳ್ಳೊಳ್ಳೆಯ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ‘ವಿಕ್ರಂ ವೇದ’, ‘ಜೆರ್ಸಿ’, ‘ನೇರ್ಕೊಂಡ ಪಾರ್ವೈ’ ಮುಂತಾದ ಹಿಟ್ ಸಿನಿಮಾಗಳು ಅವರ ಖಾತೆಯಲ್ಲಿವೆ.


