Sunday, June 7, 2026
Homeಮನರಂಜನೆರಾಣಾ ದಗ್ಗುಬಾಟಿ-ಮಿಹೀಕಾ ವಿವಾಹಕ್ಕೆ ಮಹೂರ್ತ ಫಿಕ್ಸ್

ರಾಣಾ ದಗ್ಗುಬಾಟಿ-ಮಿಹೀಕಾ ವಿವಾಹಕ್ಕೆ ಮಹೂರ್ತ ಫಿಕ್ಸ್

- Advertisement -
- Advertisement -

ಹೈದರಾಬಾದ್: ಇತ್ತೀಚೆಗಷ್ಟೆ ನಟ ರಾಣಾ ದಗ್ಗುಬಾಟಿಯವರು ತಾನು ಪ್ರೀತಿಸಿದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆ ದಿನಾಂಕ ಕೂಡ ನಿಗದಿಯಾಗಿದೆ.

ಅದರಂತೆಯೇ ಆಗಸ್ಟ್ 8 ರಂದು ರಾಣಾ ಮತ್ತು ಮಿಹೀಕಾ ಮದುವೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ರಾಣಾ ‘ವಿರಾಟಪರ್ವ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಆದರೆ ರಾಣಾ ವಿವಾಹವಾಗಿ ‘ವಿರಾಟ ಪರ್ವ‘ ಸಿನಿಮಾದ ಶೂಟಿಂಗ್​ ಮುಗಿಸಲಿದ್ದಾರಾ? ಅಥವಾ ಸಿನಿಮಾ ಬಿಡುಗಡೆಗೊಂಡ ನಂತರ ವಿವಾಹವಾಗಲಿದ್ದಾರಾ ಎಂದು ಕಾದುನೋಡಬೇಕಿದೆ.

ಕೆಲವು ದಿನಗಳ ಹಿಂದೆಯಷ್ಟೆ ರಾಣಾ ಅವರು ತನ್ನ ಅಭಿಮಾನಿಗಳಿಗೆ ತಾನು ಮಿಹೀಕಾ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿರುವುದಾಗಿ ಹೇಳಿಕೊಂಡಿದ್ದರು. ಪ್ರೀತಿಯ ಬಗ್ಗೆ ತಿಳಿಸಿದ ಒಂದೇ ವಾರದಲ್ಲಿ ರಾಣಾ ಮಿಹೀಕಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇದನ್ನು ಸ್ವತಃ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದರು

- Advertisement -

Latest News

error: Content is protected !!