Monday, June 8, 2026
Homeತಾಜಾ ಸುದ್ದಿಕೊರೊನಾ ಹೆಂಡ್ತಿ ಇದ್ದಂತೆ, ಕಂಟ್ರೋಲ್ ಮಾಡೋದು ಕಷ್ಟ: ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ

ಕೊರೊನಾ ಹೆಂಡ್ತಿ ಇದ್ದಂತೆ, ಕಂಟ್ರೋಲ್ ಮಾಡೋದು ಕಷ್ಟ: ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ

- Advertisement -
- Advertisement -

ಜಕಾರ್ತಾ: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ಆದರೆ ಈ ನಡುವೆ ಇಂಡೋನೇಷ್ಯಾದ ರಕ್ಷಣಾ ಸಚಿವರು ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೀಗ ಇವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

“ಕೊರೊನಾ ನಿಮ್ಮ ಹೆಂಡತಿ ಇದ್ದಂತೆ. ಆರಂಭದಲ್ಲಿ ನೀವು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗಲ್ಲ ಎಂದು ತಿಳಿದುಕೊಳ್ಳುತ್ತೀರಿ. ನಂತರ ಅದರ ಜೊತೆಯೇ ಬದುಕಲು ಕಲಿಯುತ್ತೀರಿ. ಅದೇ ರೀತಿ ಕೊರೊನಾ ವೈರಸ್ ಜೊತೆಗೂ ಬದುಕಬೇಕು ಎಂದು ಹೇಳಿದ್ದರು.

ಇಂಡೋನೇಷ್ಯಾದ ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜಕಾರ್ತದ ಸ್ಥಳೀಯ ವಿಶ್ವವಿದ್ಯಾಲಯವೊಂದು ಆಯೋಜಿಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಡವಟ್ಟು ಹೇಳಿಕೆ ನೀಡಿದ್ದಾರೆ.

ಸಚಿವ ಮೊಹಮ್ಮದ್ ಮಹಫೂದ್ ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಮಹಫೂದ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

- Advertisement -

Latest News

error: Content is protected !!