Friday, May 17, 2024
Homeತಾಜಾ ಸುದ್ದಿಅರ್ಬನ್ ಕಿಸಾನ್ ಮೂಲಕ ತರಕಾರಿ ಬೆಳೆಯಲು ಮುಂದಾದ ಸಮಂತಾ ಅಕ್ಕಿನೇನಿ

ಅರ್ಬನ್ ಕಿಸಾನ್ ಮೂಲಕ ತರಕಾರಿ ಬೆಳೆಯಲು ಮುಂದಾದ ಸಮಂತಾ ಅಕ್ಕಿನೇನಿ

spot_img
- Advertisement -
- Advertisement -

ಅರ್ಬನ್ ಕಿಸಾನ್ ಎನ್ನುವ ಹೊಸ ಪರಿಕಲ್ಪನೆ ಮೂಲಕ ಕೃಷಿ ಮಾಡಲು ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಮುಂದಾಗಿದ್ದಾರೆ. ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ, ಇದನ್ನು ನನಸಾಗಿಸಿಕೊಳ್ಳಲು ಇದೀಗ ಯೋಚಿಸಿದ್ದಾರೆ.

ನಟನೆಯಿಂದ ಕೃಷಿಯತ್ತ ಮುಖ ಮಾಡಿರುವ ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ. ಇದೇ ಕಾರಣಕ್ಕೆ ಇರಬೇಕು ಈಗ ಅದನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ.

ಸಮಂತಾ ತಮ್ಮ ಮನೆಯ ಮೇಲೆ ಟೆರೇಸ್​ನಲ್ಲಿ ತರಕಾರಿ ಬೆಳೆಯುವ ಪ್ಲಾನ್​ ಮಾಡಿದ್ದಾರೆ. ಇದು ಬಹಳ ಹಿಂದಿನ ಯೋಜನೆಯಾದರೂ ಅದನ್ನು ಮಾಡಲು ಲಾಕ್​ಡೌನ್​ನಿಂದಾಗಿ ಈಗ ಅವರಿಗೆ ಅವಕಾಶ ಸಿಕ್ಕಿದೆಯಂತೆ. ಟೆರೇಸ್ ಗಾರ್ಡನಿಂಗ್ ಬಗ್ಗೆ ಸಹ ತರಬೇತಿ ಪಡೆದಿದ್ದಾರಂತೆ ಸಮಂತಾ.

ಇದು ಸಮಂತಾ ಅವರ ತುಂಬಾ ದಿನಗಳ ಯೋಜನೆ. ಆದರೆ ಇದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವುದರಿಂದ ಕೃಷಿ ಮಾಡಲು ಮುಂದಾಗಿದ್ದಾರೆ.

ಇದರ ಭಾಗವಾಗಿ ಟೆರಸ್ ಗಾರ್ಡನಿಂಗ್ ಬಗ್ಗೆ ತರಬೇತಿ ಸಹ ಪಡೆದಿದ್ದು, ಅದರ ಪ್ರಕಾರ ಇದೀಗ ಗಿಡಗಳನ್ನೂ ತರಿಸಿದ್ದಾರೆ. ಮನೆಯ ಟೆರಸ್ ಮೇಲೆ ಕೃಷಿ ಮಾಡಲು ಸಿದ್ಧರಾಗಿದ್ದು, ಈ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!