Friday, June 5, 2026
HomeUncategorizedಅಲ್ಲು ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್; ‘ಪುಷ್ಪಾ-2’ ಸಕ್ಸಸ್‌ ಸಂಭ್ರಮದಲ್ಲಿದ್ದಾಗಲೇ ಅರೆಸ್ಟ್ ಆದ ಐಕಾನ್ ಸ್ಟಾರ್   

ಅಲ್ಲು ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್; ‘ಪುಷ್ಪಾ-2’ ಸಕ್ಸಸ್‌ ಸಂಭ್ರಮದಲ್ಲಿದ್ದಾಗಲೇ ಅರೆಸ್ಟ್ ಆದ ಐಕಾನ್ ಸ್ಟಾರ್   

- Advertisement -
- Advertisement -

ನವದೆಹಲಿ: ʻಪುಷ್ಪ 2: ದಿ ರೂಲ್ʼನ ಪ್ರೀಮಿಯರ್‌ ಶೋ ಡಿ.4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದ್ದು, ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾಲ್ತುಳಿತ ಸಂಭವಿಸಿ ಸಾವನ್ನಪ್ಪಿದ ಮಹಿಳೆ ರೇವತಿ (39) ಎಂದು ತಿಳಿದು ಬಂದಿದೆ. 

ಇನ್ನು ಮಹಿಳೆಯ 9 ವರ್ಷದ ಮಗ ಕೂಡ ಕಾಲ್ತುಳಿತಕ್ಕೆ ಒಳಗಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ ಸಹ ಆರೋಪಿಯಾಗಿದ್ದು, ಇವರನ್ನು ಇಂದು ಬಂಧಿಸಿ, ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

ನಟ ಈಗಾಗಲೇ ಹೈಕೋರ್ಟ್‌ಗೆ ಈ ಪ್ರಕರಣ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು, ಈ ನಡುವೆ ಚಿಕ್ಕಡಪಲ್ಲಿ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ ಎನ್ನಲಾಗಿದೆ.  

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಸಂತಾಪ ಸೂಚಿಸಿ ಮೃತ ರೇವತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೆ ಗಾಯಗೊಂಡವರ ಚಿಕಿತ್ಸಾವೆಚ್ಚವನ್ನು ನಮ್ಮ ಇಡೀ ತಂಡ ನೋಡಿಕೊಳ್ಳಲಿದೆ. ಅಲ್ಲದೇ ಭವಿಷ್ಯದಲ್ಲಿ ಅಭಿಮಾನಿಗಳು ಎಚ್ಚರಿಕೆ ಮತ್ತು ಜಾಗರೀಕತೆಯಿಂದಿರಿ ಎಂದು ಎಚ್ಚರಿಕೆ ಸಂದೇಶವನ್ನು ಕೂಡ ನೀಡಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!