ಕೋಟ: ಸ್ಥಳೀಯರ ತಂಡವೊಂದು ಬೇಳೂರು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕಿ ಸುಶೀಲಾ ಅವರಿಗೆ ಮಾನಸಿಕ ಕಿರುಕುಳ ನೀಡಿರುವುದಾಗಿ ಕುಂದಾಪುರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸರು 15 ಮಂದಿಯ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಯವರಿಗೆ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ದೂರನ್ನು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರಾದ ಜಯಶೀಲ ಶೆಟ್ಟಿ, ರಾಘವೇಂದ್ರ ಮರಕಾಲ, ಕರುಣಾಕರ ಶೆಟ್ಟಿ ಬೇಳೂರು, ದಿನಕರ ಶೆಟ್ಟಿ ಮೊಗೆಬೆಟ್ಟು, ಸುರೇಶ ಮೊಗವೀರ, ಕೃಷ್ಣಯ್ಯ ಮೊಗವೀರ, ರಾಜಗೋಪಾಲ ಅಡಿಗ, ಅಶೋಕ್ ಕುಮಾರ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ, ರವಿ ಮುಳ್ಳುಗುಡ್ಡೆ, ಪ್ರವೀಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ಶೆಟ್ಟಿ, ರವಿ ದೇವಾಡಿಗ, ಶಶಿಧರ ಶೆಟ್ಟಿ ಅವರು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿಂದನೆಯನ್ನೂ ಮಾಡಿದ್ದು, ಈ ಘಟನೆಯಿಂದ ನನಗೆ ಮಾನಸಿಕವಾಗಿ ನೋವು ಉಂಟಾಗಿದೆ ಎಂದು ಸುಶೀಲಾ ದೂರಿನಲ್ಲಿ ತಿಳಿಸಿದ್ದಾರೆ.