Wednesday, June 3, 2026
Homeಕರಾವಳಿಉಡುಪಿಉಡುಪಿ; 25 ವರ್ಷಗಳ ಹಳೆಯ ಹೋಂಡಾ ಬೈಕಿನಲ್ಲಿ ಅಪ್ಪನನ್ನು ದೇಶ ಸುತ್ತಿಸಿದ ಮಗನಿಗೆ 14 ಲಕ್ಷದ...

ಉಡುಪಿ; 25 ವರ್ಷಗಳ ಹಳೆಯ ಹೋಂಡಾ ಬೈಕಿನಲ್ಲಿ ಅಪ್ಪನನ್ನು ದೇಶ ಸುತ್ತಿಸಿದ ಮಗನಿಗೆ 14 ಲಕ್ಷದ ಹೊಸ ಬೈಕ್ ನೀಡಿ ಗೌರವಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ

- Advertisement -
- Advertisement -

ಉಡುಪಿ; 25 ವರ್ಷಗಳ ಹಳೆಯ ಹೋಂಡಾ ಬೈಕಿನಲ್ಲಿ ಅಪ್ಪನನ್ನು ದೇಶ ಸುತ್ತಿಸಿದ ಉಡುಪಿಯ ಕಾಪು ತಾಲೂಕಿನ ಶಿರ್ವ ನಿವಾಸಿ ಪ್ರಜ್ವಲ್ ಶೆಣೈ ಅವರನ್ನು ಹೀರೋ ಮೋಟೋ ಕಾರ್ಪ್ ಸಂಸ್ಥೆ 14 ಲಕ್ಷದ ಹೊಸ ಬೈಕ್ ನೀಡಿ ಗೌರವಿಸಿದೆ.

ಪ್ರಜ್ವಲ್ ಶೆಣೈ ಅವರು ದುರ್ಗಮ ಹಾದಿಯಲ್ಲಿ ತಮ್ಮ 25 ವರ್ಷ ಹಳೆಯ ಹೀರೋ ಹೊಂಡಾ ಸ್ಟೆಂಡ‌ರ್ ಬೈಕ್‌ನಲ್ಲಿ ಸಂಚರಿಸಿ ಸುಮಾರು 17,982 ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನವನ್ನು ಮೆರೆದಿದ್ದರು. ಇದೀಗ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ ಸುಮಾರು 14 ಲಕ್ಷ ಬೆಲೆಬಾಳುವ ಹೀರೋ ಸೆಂಟೆನ್ನಿಯಲ್ ಬೈಕ್‌ ನೀಡಿ ಗೌರವಿಸಿದೆ.

ಅಂದಹಾಗೆ ಹೀರೋ ಹೊಂಡಾ ಸ್ಪ್ಲೆಂಡರ್ ಆ ಕಾಲದ ಸೂಪರ್ ಬೈಕ್. ಮಧ್ಯಮ ವರ್ಗದ ಜನರ ಕನಸಿನ ಬೈಕಾಗಿತ್ತು. ಮೈಲೇಜ್, ಪರ್ಫಾಮೆನ್ಸ್​ಗೆ ಸಾಟಿಯಿರಲಿಲ್ಲ. ಇದೇ ಬೈಕ್​ ಏರಿ ತಂದೆ-ಮಕ್ಕಳು ದೇಶದ 17 ರಾಜ್ಯ ಪ್ರವಾಸ ಮಾಡಿದ್ದಾರೆ. ಉಡುಪಿಯ ಶಕ್ತಿ ಶೋ ರೂಮ್​ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ, ಪ್ರಜ್ವಲ್ ಶೆಣೈ ಅವರಿಗೆ ಬೈಕ್ ಕೀ ಹಸ್ತಾಂತರಿಸಲಾಯಿತು. ಕೇಕ್ ಕಟ್ಟಿಂಗ್ ಮಾಡಿ ತಂದೆ ತಾಯಿಗೆ ಸಿಹಿ ಕೊಟ್ಟಾಗ ಬೈಕರ್ ಪ್ರಜ್ವಲ್ ಶೆಣೈ ಭಾವುಕರಾಗಿದ್ದಾರೆ.



- Advertisement -

Latest News

error: Content is protected !!