Friday, June 5, 2026
Homeತಾಜಾ ಸುದ್ದಿವಧುವಿಗೆ ತಾಳಿ ಕಟ್ಟುವಾಗಲೇ ಮೂರ್ಛೆ ಹೋದ ವರ: ಎಚ್ಚರವಾದಾಗ ಕಾದಿತ್ತು ಊಹಿಸಲಾಗದ ಶಾಕ್

ವಧುವಿಗೆ ತಾಳಿ ಕಟ್ಟುವಾಗಲೇ ಮೂರ್ಛೆ ಹೋದ ವರ: ಎಚ್ಚರವಾದಾಗ ಕಾದಿತ್ತು ಊಹಿಸಲಾಗದ ಶಾಕ್

- Advertisement -
- Advertisement -

ಉತ್ತರ ಪ್ರದೇಶ : ಇಲ್ಲಿನ ರಾಂಪುರ ಪಟ್ಟಣದಲ್ಲಿನ ಜುಗಲ್ ಕಿಶೋರ್ ಹಾಗೂ ಇಂದಿರಾಗೆ ವಿವಾಹ ನಿಶ್ಚಯವಾಗಿತ್ತು. 25 ವರ್ಷದ ಕಿಶೋರ್, ಇಂದಿರಾಗೆ ಹಾರ ಹಾಕಿದ ನಂತ್ರ, ತಾಳಿ ಕಟ್ಟುವಾಗಲೇ ಮೂರ್ಛೆ ರೋಗವಿದ್ದ ಕಾರಣ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಇತ್ತ ಮೂರ್ಛೆ ರೋಗವಿರುವಂತ ವರನನ್ನು ಮದುವೆಯಾಗಲು ನಿರಾಕರಿಸಿದಂತ ಇಂದಿರಾ, ಅಥಿತಿಯಾಗಿ ಮದುವೆಗೆ ಬಂಧಿದ್ದಂತ ಭಾವನನ್ನು, ಮದುವೆಗೆ ಒಪ್ಪಿಸಿದ್ದಾಳೆ. ಜೊತೆಗೆ ಕುಟುಂಬದವನ್ನು ಒಪ್ಪಿಸಿ, ಆತನನ್ನು ನಿಗಧಿಯಾಗಿದ್ದಂತ ಮುಹೂರ್ತದಲ್ಲಿಯೇ ವಿವಾಹ ಆಗಿದ್ದಾಳೆ. ಈ ಮೂಲಕ ಆಸ್ಪತ್ರೆಯಿಂದ ಮದುವೆ ಮಂಟವಕ್ಕೆ ವಾಪಾಸ್ ವರ ಕಿಶೋರ್ ಬಂದಾಗ, ಇಂದಿರಾ ಬೇರೊಬ್ಬನನ್ನು ವಿವಾಹ ಆಗಿ ಶಾಕ್ ನೀಡಿದ್ದಾರೆ.

ಇದರಿಂದಾಗಿ ಕೋಪಗೊಂಡಂತ ವರ ಕಿಶೋರ್ ಹಾಗೂ ಕುಟುಂಬಸ್ಥರು ಇಂದಿರಾ ಕುಟುಂಬಸ್ಥರ ಜೊತೆಗೆ ಜಳಕ್ಕೆ ಇಳಿದಿದ್ದಾರೆ. ಜಗಳ ತಾರಕಕ್ಕೆ ಏರಿ, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ವಿಷಯ ತಿಳಿದಂತ ಪೊಲೀಸರು, ವಿವಾಹ ಆಗಿದೆ. ಈಗ ಏನೂ ಮಾಡೋದಕ್ಕೆ ಆಗೋದಿಲ್ಲ ಎಂಬುದಾಗಿ ಕೈಚೆಲ್ಲಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತ ವರ, ವರನ ಕುಟುಂಬಸ್ಥರು ವಾಪಾಸ್ ತೆರಳಿದ್ದಾರೆ.

- Advertisement -

Latest News

error: Content is protected !!