Wednesday, April 24, 2024
Homeತಾಜಾ ಸುದ್ದಿಚಲಿಸುತ್ತಿದ್ದ ಬಸ್ ನಿಂದ ಬಿದ್ದ ಕಂಡಕ್ಟರ್: 5 ಕಿ.ಮೀ ಹೋದ ಬಳಿಕ ಚಾಲಕನಿಗೆ ಗೊತ್ತಾಯ್ತು...

ಚಲಿಸುತ್ತಿದ್ದ ಬಸ್ ನಿಂದ ಬಿದ್ದ ಕಂಡಕ್ಟರ್: 5 ಕಿ.ಮೀ ಹೋದ ಬಳಿಕ ಚಾಲಕನಿಗೆ ಗೊತ್ತಾಯ್ತು ವಿಚಾರ

spot_img
- Advertisement -
- Advertisement -

ತಮಿಳುನಾಡು ಬಸ್​ನಿಂದ ಕಂಡಕ್ಟರ್ ಆಕಸ್ಮಿಕವಾಗಿ ಬಿದ್ದು ಸುಮಾರು 5 ಕಿಲೋ ಮೀಟರ್ ದೂರ ಹೋದ ಬಳಿಕ ಈ ವಿಚಾರ ಚಾಲಕನ ಗಮನಕ್ಕೆ ಬಂದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.

ವಡಕಂಕುಲಂ ಮತ್ತು ನಾಗರಕೋಯಿಲ್ ಮಾರ್ಗದಲ್ಲಿ ಘಟನೆ ಸಂಭವಿಸಿದ್ದು, ಚಲಿಸುತ್ತಿರುವ ಬಸ್​​ನಿಂದ ಕಂಡಕ್ಟರ್ ಮಹಾಲಿಂಗಂ ಉರುಳಿ ಬಿದ್ದಿದ್ದಾರೆ. ಸುಮಾರು ಐದು ಕಿಲೋಮೀಟರ್​ಗಳ ನಂತರ ಕಂಡಕ್ಟರ್ ಇಲ್ಲದಿರುವುದನ್ನು ಕಂಡ ಸಾರ್ವಜನಿಕರು ಚಾಲಕನನ್ನು ವಿಚಾರಿಸಿದಾಗ ಅನಾಹುತ ಬೆಳಕಿಗೆ ಬಂದಿದೆ.

ಕೂಡಲೇ ಬಸ್​ ಅನ್ನು ವಾಪಸ್ ತೆಗೆದುಕೊಂಡು ಹೋದ ಚಾಲಕ ರಸ್ತೆಯ ಪಕ್ಕದಲ್ಲಿ ಗಾಯಗಳಾಗಿ ಬಿದ್ದಿದ್ದ ಮಹಾಲಿಂಗಂನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!