Thursday, October 8, 2026
Homeತಾಜಾ ಸುದ್ದಿಸಿಎಂ ಆದಮೇಲೆ ನನ್ನ ಟ್ರ್ಯಾಪ್ ಮಾಡಲು ಯತ್ನ; ನವದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿ

ಸಿಎಂ ಆದಮೇಲೆ ನನ್ನ ಟ್ರ್ಯಾಪ್ ಮಾಡಲು ಯತ್ನ; ನವದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿ

- Advertisement -
- Advertisement -

ನವದೆಹೆಲಿ: ನನ್ನನ್ನೇ ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಇಂದು ಹೇಳಿಕೆ ನೀಡಿರುವ ಡಿ.ಕೆ‌. ಶಿವಕುಮಾರ್, ಮುಖ್ಯಮಂತ್ರಿ ಆದಮೇಲೆ ನನ್ನ ಟ್ರ್ಯಾಪ್ ಮಾಡಲು ಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ನನ್ನ ಹತ್ತಿರ ಕೆಲವರು ಬಂದಿದ್ದರು, ಪೋಟೋಗಳನ್ನು ಬೇಕಿದ್ದರೆ ಕೊಡುತ್ತೇನೆ, ಎಲ್ಲಾ ಮಾಹಿತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿರುವ ಸಿಎಂ, ಯಾರು ಇದಕ್ಕೆ ಪಿತಾಮಹ ಅಂತಾ ಗೊತ್ತಿದೆ,‌ ಹಾಗಾಗಿ ನಮ್ಮವರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೇ ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ, ಸುಮ್ಮನೆ ನಾನು ಮಾತನಾಡುವುದಿಲ್ಲ, ಎಲ್ಲಾ ಸಾಕ್ಷ್ಯಧಾರಗಳಿವೆ, ಯಾರು ಹಣಕಾಸು ನೆರವು ಕೊಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪ ಮಾಡಿದ್ದ ಸಿಎಂ, ಎಚ್ಚರಿಕೆಯಿಂದ ಇರುವಂತೆ ಸಚಿವರೆ ಸೂಚನೆ ನೀಡಿದ್ದರು.

- Advertisement -

Latest News

error: Content is protected !!