Thursday, June 4, 2026
Homeತಾಜಾ ಸುದ್ದಿಇಂದಿನಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ ಶಿರಡಿ ಸಾಯಿಬಾಬಾ ಮಂದಿರ!..

ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ ಶಿರಡಿ ಸಾಯಿಬಾಬಾ ಮಂದಿರ!..

- Advertisement -
- Advertisement -

ಮಹಾರಾಷ್ಟ್ರ: ಕೊರೊನಾ ಅಟ್ಟಹಾಸದ ನಂತರ ಹಲವು ದೇವಾಲಯಗಳು ಭಕ್ತರ ದರ್ಶನಕ್ಕೆ ತೆರೆದುಕೊಂಡರೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರ ಹಿನ್ನೆಲೆಯಲ್ಲಿ ಈವರೆಗೆ ಮಹಾರಾಷ್ಟ್ರ ಸರ್ಕಾರ ಶಿರಡಿ ಸಾಯಿಬಾಬಾ ಮಂದಿರ ತೆರೆದಿರಲಿಲ್ಲ. ಆದರೆ ಈಗ ಸಿಹಿಸುದ್ದಿ ನೀಡಿರುವ ಸರ್ಕಾರ ಕಳೆದ ಒಂಬತ್ತು ತಿಂಗಳಿನಿಂದ ಬಂದ್ ಆಗಿದ್ದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಇಂದಿನಿಂದ ಭಕ್ತರ ದರ್ಶನಕ್ಕಾಗಿ ಅನುವು ಮಾಡುತ್ತಿದೆ.

ಶಿರಡಿ ಸಾಯಿಬಾಬಾ ಮಂದಿರ ಇಂದಿನಿಂದ ಭಕ್ತರಿಗೆ ಕೊರೋನಾ ನಿಯಾಮಾವಳಿಗಳ ಅನ್ವಯ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದೆ. ಬರುವ ಭಕ್ತರು ಕೊರೊನಾ ನೆಗೆಟಿವ್ ಪರೀಕ್ಷೆಯ ರಿಪೋರ್ಟ್ ತರುವುದು ಕಡ್ಡಾಯ ಎಂದು ದೇವಾಲಯ ಪ್ರಕಟಿಸಿದೆ.

- Advertisement -

Latest News

error: Content is protected !!