Saturday, June 13, 2026
Homeತಾಜಾ ಸುದ್ದಿಶಿಮ್ಲಾ ಮೇಘಸ್ಫೋಟದಿಂದ ಐವರ ಸಾವು: ಐವರು ನಾಪತ್ತೆ: ಗುಡ್ಡ ಕುಸಿಯುವ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆ

ಶಿಮ್ಲಾ ಮೇಘಸ್ಫೋಟದಿಂದ ಐವರ ಸಾವು: ಐವರು ನಾಪತ್ತೆ: ಗುಡ್ಡ ಕುಸಿಯುವ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆ

- Advertisement -
- Advertisement -

ಶಿಮ್ಲಾ: ದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ಪ್ರಕೋಪ ಬಿರುಸಾಗಿಯೇ ಮುಂದುವರಿದಿದೆ. ಹಿಮಾಚಲ ಪ್ರದೇಶದ ಕುಲು ಮತ್ತು ಶಿಮ್ಲಾದಲ್ಲಿ ಮೇಘ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಐವರು ಅಸುನೀಗಿದ್ದು, ಮತ್ತೆ ಐವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಎಲ್ಲರೂ ಕೊನೆಯುಸಿರೆಳೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿದ್ಯುತ್ ಉತ್ಪಾದನ ಕೇಂದ್ರದಲ್ಲಿ ಕೆಲಸ ಮಾಡುವ 25 ಮಂದಿಯನ್ನು ಭದ್ರತಾ ಸಿಬಂದಿ ರಕ್ಷಿಸಿದ್ದಾರೆ. ಶಿಮ್ಲಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5ರಲ್ಲಿ ಸಂಚಾರಕ್ಕೆ ಅಡ್ಡಿ ಯಾಗಿದೆ. ಬಿರುಗಾಳಿಯಿಂದಾಗಿ ವಿದ್ಯುತ್ ಮತ್ತು ದೂರವಾಣಿ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದೆ.

ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಣ ಮಾಡುವಾಗ ಗುಡ್ಡ ಕುಸಿಯುವ ಭೀಕರ ದೃಶ್ಯ ಸೆರೆಯಾಗಿದೆ.

- Advertisement -

Latest News

error: Content is protected !!