Saturday, June 6, 2026
Homeಕರಾವಳಿಉಡುಪಿ21,008 ಬಾರಿ ರಾಮ ನಾಮ ಬರೆದು ರಾಮ ಪಟ್ಟಾಭಿಷೇಕದ ಚಿತ್ರ ರಚಿಸಿದ ಉಡುಪಿಯ ಶಶಾಂಕ್ ಪೈ

21,008 ಬಾರಿ ರಾಮ ನಾಮ ಬರೆದು ರಾಮ ಪಟ್ಟಾಭಿಷೇಕದ ಚಿತ್ರ ರಚಿಸಿದ ಉಡುಪಿಯ ಶಶಾಂಕ್ ಪೈ

- Advertisement -
- Advertisement -

ಉಡುಪಿ: ಅಯೋಧ್ಯೆಯಲ್ಲಿ ರಾಮ‌‌ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಉಡುಪಿಯ ಬಾಲಕ ಶಶಾಂಕ್ ಪೈ ರಾಮ ಮಂತ್ರದ ಮೂಲಕ ರಾಮ ಪಟ್ಟಾಭಿಷೇಕದ ಚಿತ್ರ ರಚಿಸಿ ಗಮನ ಸೆಳೆದಿದ್ದಾನೆ.

ರಾಮ ಎಂದು ಹೆಸರು ಮೂಲಕ ಬರೆಯುವ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯನ ಚಿತ್ರವನ್ನು ಶಶಾಂಕ್ ಪೈ ಬಿಡಿಸಿದ್ದಾನೆ.

21,008 ಬಾರಿ ರಾಮ ನಾಮ ಬರೆಯುವ ಮೂಲಕ ಚಿತ್ರ ರಚನೆ ಮಾಡಿದ್ದು, ಕೇವಲ ಆರು ಗಂಟೆಗಳಲ್ಲಿ ರಚಿಸಲಾಗಿದೆ.

ದಿನಕ್ಕೆ ಎರಡು 2 ಗಂಟೆಯಂತೆ ಸತತ ಮೂರು ರಾತ್ರಿಗಳಲ್ಲಿ ಶಶಾಂಕ್ ಚಿತ್ರ ರಚನೆ ಮಾಡಿದ್ದು, ಉಡುಪಿಯ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ‌.

- Advertisement -

Latest News

error: Content is protected !!