Sunday, June 7, 2026
Homeಕರಾವಳಿಮೀನುಗಾರಿಕೆ ವೇಲೆ ಬೋಟಿನಿಂದ ಬಿದ್ದು ವ್ಯಕ್ತಿ ಸಾವು

ಮೀನುಗಾರಿಕೆ ವೇಲೆ ಬೋಟಿನಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಮಲ್ಪೆ: ಮೀನುಗಾರರೊಬ್ಬರು ಮೀನುಗಾರಿಕೆ ವೇಳೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಅಂಕೋಲಾದ ಸಾರಂಗ ಎಂಬವರ ಮಗ ವಿಶ್ವಾಸ ಕಾಶಿನಾಥ ಸಾರಂಗ(37)ಮೃತರು. ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಜ.12 ಶುಕ್ರವಾರದಂದು ಮಲ್ಪೆ ಬಂದರಿನಿಂದ ಪಂಡರಾಪುರ ಹೆಸರಿನ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.

ಸಂಜೆಯ ವೇಳೆ ಸುಮಾರು 40 ನಾಟಿಕಲ್ ಮೈಲಿ ದೂರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆಯಲ್ಲಿ ರಭಸವಾಗಿ ಬಂದ ಅಲೆಯಿಂದ ವಿಶ್ವಾಸ್ ಆಯ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರೆ ಎನ್ನಲಾಗಿದೆ. ಕಾಶಿನಾಥ ಸಾರಂಗ ಅವರ ಮೃತದೇಹವು ಜ.18ರಂದು ಮಧ್ಯಾಹ್ನ ವೇಳೆ ಪತ್ತೆಯಾಯಿತು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!