Saturday, May 4, 2024
Homeಕರಾವಳಿರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಖಂಡ ರಾಮಾಯಣ ಪಾರಾಯಣ

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಖಂಡ ರಾಮಾಯಣ ಪಾರಾಯಣ

spot_img
- Advertisement -
- Advertisement -

ಮಂಗಳೂರು: ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ
ಮಂಗಳೂರಿನಲ್ಲಿ ಸಂಸ್ಕೃತ ಭಾರತಿ ಸಂಘಟನೆಯಿಂದ ಅಖಂಡ ರಾಮಾಯಣ ಪಾರಾಯಣ ನಡೆಸಲಾಗುತ್ತಿದೆ.

ಸುಧೀರ್ಘ 51 ಗಂಟೆಗಳ ಅಹೋರಾತ್ರಿ ಅಖಂಡ ರಾಮಾಯಣ ಪಾರಾಯಣ ನಡೆಸಲಾಗುತ್ತಿದ್ದು,‌ ಶುಕ್ರವಾರ ಮಧ್ಯಾಹ್ನ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆಯವರೆಗೆ ನಿರಂತರ‌ ಪಾರಾಯಣ ನಡೆಯಲಿದೆ.

ವಾಲ್ಮೀಕಿ ರಾಮಾಯಣದ 24,000 ಸಂಸ್ಕೃತ ಶ್ಲೋಕಗಳ ಪಠಣ ಮಾಡಲಾಗುತ್ತಿದ್ದು, ಪ್ರತಿ ತಂಡದಲ್ಲಿ ಕನಿಷ್ಠ 20 ಮಂದಿಯಿಂದ ಸುಮಾರು 1000 ಶ್ಲೋಕಗಳ ಪಠಣ ಮಾಡಲಾಗುತ್ತಿದೆ.

ಒಂದು ಸಾವಿರ ಶ್ಲೋಕ ಪಠಣಕ್ಕೆ ಪ್ರತೀ ತಂಡಕ್ಕೆ ಎರಡು ಗಂಟೆಗಳ ಅವಧಿ ನಿಗದಿ ಪಡಿಸಲಾಗಿದ್ದು, ಮಂಗಳೂರು, ಕಾಸರಗೋಡು, ಉಡುಪಿ, ಪುತ್ತೂರು, ಕೊಡಗು ವ್ಯಾಪ್ತಿಯ 500 ಮಂದಿ ಭಾಗಿಯಾಗಿದ್ದಾರೆ‌.

ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ಮಂಗಳೂರಿನ ಸಂಘನಿಕೇತನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ‌.

- Advertisement -
spot_img

Latest News

error: Content is protected !!