Tuesday, June 30, 2026
Homeಕರಾವಳಿಪುತ್ತೂರು; ತಿಂಗಳಾಡಿಯಲ್ಲಿ ಅಂಗಡಿಗೆ ಬಂದ ಹಿಂದೂ ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ ಆರೋಪ;  ಸ್ಥಳದಲ್ಲಿ...

ಪುತ್ತೂರು; ತಿಂಗಳಾಡಿಯಲ್ಲಿ ಅಂಗಡಿಗೆ ಬಂದ ಹಿಂದೂ ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ ಆರೋಪ;  ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

- Advertisement -
- Advertisement -

ಪುತ್ತೂರು : ಅಂಗಡಿಯೊಂದಕ್ಕೆ ದಿನಿಸಿ ಖರೀದಿಗೆ ಬಂದ ಹಿಂದೂ ಮಹಿಳೆಗೆ ಅಂಗಡಿ ಮಾಲೀಕನಿಲ್ಲದ ವೇಳೆ ಅನ್ಯಕೋಮಿನ ಸೇಲ್ಸ್ ಮೆನ್ ಯುವಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಿಂಗಳಾಡಿಯಲ್ಲಿ ನಡೆದಿದೆ.

ಸರ್ವೆ ನೇರೋಳ್ತಡ್ಕದ ಮಹಿಳೆಯೋರ್ವರು  ಇಂದು ಸಂಜೆ ಅಂಗಡಿಗೆ ತಿಂಗಳಾಡಿಯಲ್ಲಿರುವ ಸೂಪ‌ರ್ ಬಜಾರ್ ಗೆ ದಿನಸಿ ಖರೀದಿಸಲೆಂದು ಬಂದಿದ್ದರು. ಆಗ ಅಂಗಡಿ ಮಾಲೀಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದರು ಎನ್ನಲಾಗಿದೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಯ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಇದರಿಂದ ಅಲ್ಲಿ ಜನ ಸೇರಿದ್ದಾರೆ. ಆಗ ಆರೋಪಿ ಬದ್ರುದ್ದೀನ್ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸುದ್ದಿಯಾಗುತ್ತಲೇ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಹಿಂದೂ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು, ನೆರೆದವರು ಪೊಲೀಸರನ್ನು ಆಗ್ರಹಿಸಿದ್ದು ನಾಳೆ ಬೆಳಗ್ಗೆ 8 ಗಂಟೆ ಮೊದಲು ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!