- Advertisement -
- Advertisement -
ಪುತ್ತೂರು: ಕುಂಬ್ರದಲ್ಲಿ ಸರ್ಕಾರಿ ಶಾಲೆ, ಕಚೇರಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಇಲ್ಲಿನ ಒಳಮೊಗ್ರು ಗ್ರಾ.ಪಂ. ಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ.
ಗ್ರಾ.ಪಂ ಕಚೇರಿಯಲ್ಲಿದ್ದ 7 ಸಾವಿರ ರೂ. ಮೌಲ್ಯದ ಸಿಸಿ ಕೆಮರಾದ ಡಿವಿಆರ್ ಕದ್ದೊಯ್ದಿದ್ದಾರೆ. ಗ್ರಾಮ ಕರಣಿಕ ಕಚೇರಿಯ ಪೀಠೊಪಕರಣಗಳಿಗೆ ಹಾನಿ ಎಸಗಿದ್ದಾರೆ. ಇನ್ನುಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ನುಗ್ಗಿರುವ ಕಳ್ಳರು ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಒಳ ನುಗ್ಗಿ ಮೂರು ಅಲ್ಮೇರಾಗಳ ಬಾಗಿಲು ತೆರೆದಿದ್ದು 10 ಸಾವಿರ ನಗದು ಹಾಗೂ 15 ಸಾವಿರ ಮೌಲ್ಯದ 3 ಡಿವಿಆರ್‌ಗಳನ್ನು ಕಳವು ಮಾಡಿದ್ದಾರೆ.
ಕೆಪಿಎಸ್ ಪ್ರಾಥಮಿಕ ಶಾಲೆಯ ಏಳು ಅಲ್ಮೇರಾ, ಟೇಬಲ್‌ಗಳನ್ನು ಜಾಲಾಡಿದ್ದಾರೆ.ಶ್ವಾನದಳ ಹಾಗೂ ಬೆರಳಚ್ಚು ತಜ್ಞ ಸಚಿನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -