Thursday, June 4, 2026
Homeಕರಾವಳಿಬೆಳ್ತಂಗಡಿ: ನಾಲ್ಕು ವಾಹನಗಳಿಗೆ ಡಿಕ್ಕಿಯಾದ ಸರ್ಕಾರಿ ಇಲಾಖೆಯ ಕಾರು; ಬೈಕ್‌ ಸವಾರನಿಗೆ ಗಂಭೀರ ಗಾಯ    

ಬೆಳ್ತಂಗಡಿ: ನಾಲ್ಕು ವಾಹನಗಳಿಗೆ ಡಿಕ್ಕಿಯಾದ ಸರ್ಕಾರಿ ಇಲಾಖೆಯ ಕಾರು; ಬೈಕ್‌ ಸವಾರನಿಗೆ ಗಂಭೀರ ಗಾಯ    

- Advertisement -
- Advertisement -

ಬೆಳ್ತಂಗಡಿ:  ಸರಕಾರಿ ಇಲಾಖೆಯ ಕಾರೊಂದು ಚಾಲಕನ ಅಜಾಗರೂಕತೆಯಿಂದ ನಾಲ್ಕು ವಾಹನಗಳಿಗೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಲೋಕೋಪಯೋಗಿ ಇಲಾಖೆಯ ವಾಹನವನ್ನು ಚಾಲಕ ಉಮೇಶ್‌ ಅವರು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಅದು ಒಂದು ಆಟೋ ಹಾಗೂ ಬೈಕ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಬೈಕ್‌ ಸವಾರ ಖಾಸಗಿ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್‌ ಜೇಮ್ಸ್ (50) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಸ್‌ಡಿಎಂ ಸಂಸ್ಥೆಯ ಉದ್ಯೋಗಿ ಶಿವಾನಂದ ಅವರ ಕಾರಿನ ಮುಂಭಾಗಕ್ಕೆ ಹಾಗೂ ಆಟೋ ರಿಕ್ಷಾಕ್ಕೂ ಹಾನಿಯಾಗಿದೆ. ಸರಕಾರಿ ಇಲಾಖೆಯ ಕಾರಿನ ಎದುರು ಭಾಗ ಜಖಂಗೊಂಡಿದೆ. ಢಿಕ್ಕಿ ಹೊಡೆದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ತಕ್ಷಣ ಆಟೋ ಚಾಲಕರು ಬೆನ್ನತ್ತಿ ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಸಂಚಾರ ಠಾಣೆಗೆ ಹಸ್ತಾಂತರಿಸಲಾಗಿದೆ.ಕಾರು ಚಾಲಕ ಶಿವಾನಂದ ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆರೋಪಿ ಚಾಲಕನ ವೈದ್ಯಕೀಯ ವರದಿ ಬಳಿಕ ದೂರು ದಾಖಲಾಗಲಿದೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ

- Advertisement -

Latest News

error: Content is protected !!