Sunday, May 19, 2024
Homeಕರಾವಳಿಮಂಗಳೂರು: ಅಲ್ಪಸಂಖ್ಯಾತರ ಮೆಟ್ರಿಕ್‌ ಅನಂತರದ ಬಾಲಕರ ಹಾಸ್ಟೆಲ್‌ಗೆ ಜಮೀರ್ ದಿಢೀರ್‌ ಭೇಟಿ; ಅವ್ಯವಸ್ಥೆ ಕಂಡು ಗರಂ ಆದ...

ಮಂಗಳೂರು: ಅಲ್ಪಸಂಖ್ಯಾತರ ಮೆಟ್ರಿಕ್‌ ಅನಂತರದ ಬಾಲಕರ ಹಾಸ್ಟೆಲ್‌ಗೆ ಜಮೀರ್ ದಿಢೀರ್‌ ಭೇಟಿ; ಅವ್ಯವಸ್ಥೆ ಕಂಡು ಗರಂ ಆದ ಸಚಿವರು

spot_img
- Advertisement -
- Advertisement -

ಮಂಗಳೂರು:  ವಸತಿ ಹಾಗೂ ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಜಮೀರ್‌ಅಹಮದ್‌ ಖಾನ್‌ ಮಂಗಳವಾರ ಸಂಜೆ ನಗರದ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್‌ ಅನಂತರದ ಬಾಲಕರ ಹಾಸ್ಟೆಲ್‌ಗೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು.

ಸಚಿವ ರಹೀಮ್‌ ಖಾನ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಕೂಡ ಜತೆಗಿದ್ದರು. ಈ ವೇಳೆ ಹಾಸ್ಟೆಲ್‌ನಲ್ಲಿ ಶುಚಿತ್ವ ಕಾಪಾಡದಿರುವುದು, ಶೌಚಾಲಯ ನಿರ್ವಹಣೆ ಸರಿ ಇಲ್ಲದೇ ಇರೋದನ್ನು ಕಂಡು ಸಿಡಿಮಿಡಿಗೊಂಡರು.

ಇದೇ ವೇಳೆ ಅಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಕೊಡುತ್ತಿಲ್ಲ, ವಾರಕ್ಕೊಮ್ಮೆ ಬದಲಿಗೆ 15 ದಿನಕ್ಕೆ ಕೋಳಿ ಮಾಂಸಾಹಾರ ನೀಡಲಾಗುತ್ತಿದೆ. ಚಾರ್ಟ್‌ ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ ಎಂದು ದೂರಿದರು.5 ವರ್ಷ ಆದರೂ ಬೆಡ್‌ ಶೀಟ್‌ ಕೊಟ್ಟಿಲ್ಲ, ತಲೆದಿಂಬು ಇಲ್ಲ, ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವರ ಸಮ್ಮುಖದಲ್ಲಿ ಆರೋಪಿಸಿದರು. ತಕ್ಷಣ ಸಚಿವರು ತಾಲೂಕು ವಿಸ್ತರಣೆ ಅಧಿಕಾರಿ ಮಂಜುನಾಥ್‌ ಅವರನ್ನು ಸ್ಥಳದಲ್ಲೇ ಅಮಾನತು ಮಾಡಿ ಆದೇಶ ಹೊರಡಿಸಿದರು. ಡಿಎಂಒ ಜಿನೇಂದ್ರ ಹಾಗೂ ವಾರ್ಡನ್‌ ಅಶೋಕ್‌ಗೆ ಶೋಕಾಸ್‌ ನೋಟಿಸ್‌ ನೀಡಲು ಸೂಚಿಸಿದರು.

- Advertisement -
spot_img

Latest News

error: Content is protected !!