Thursday, June 4, 2026
Homeತಾಜಾ ಸುದ್ದಿಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಿರಿಯ ನಟ‌ 'ಕೊಡಗನೂರು ಜಯಕುಮಾರ್' ವಿಧಿವಶ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಿರಿಯ ನಟ‌ ‘ಕೊಡಗನೂರು ಜಯಕುಮಾರ್’ ವಿಧಿವಶ

- Advertisement -
- Advertisement -

ದಾವಣಗೆರೆ: ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ (70) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತವಾದ ತಕ್ಷಣ ಆಸ್ಪತ್ರೆಗೆ ದಾಖಲಾದ್ರೂ.. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅವರು ಜೂನಿಯರ್ ರಾಜಕುಮಾರ್ ಅಂತಲೇ ಪ್ರಸಿದ್ಧಿಯಾಗಿದ್ದರು. ಕಿರುತೆರೆಯಲ್ಲಿ ಪಾಪ ಪಾಂಡು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ್ದರು.

ಜಯಕುಮಾರ್ ತಮ್ಮ ನಟನೆಯ ಮೂಲಕ ನಮ್ಮೆದುರು ರಾಜ್‌ಕುಮಾರ್‌ ಅವರನ್ನು ಪ್ರತ್ಯಕ್ಷವಾಗಿಸುವ ಚತುರತೆ ತೋರಿದವರು. ಮೂಲತಃ ದಾವಣಗೆರೆ ಜಿಲ್ಲೆಯ ಕೊಡಗಾನೂರಿನವರಾದ ಜಯಕುಮಾರ್ ಗುಬ್ಬಿ ಕಂಪನಿಯ ಕಲಾವಿದ. 25ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 5 ವರ್ಷಗಳ ಕಾಲ ನಟಿಸಿ, ಕನ್ನಡ ರಂಗಭೂಮಿಗೆ ಇವರು ನೀಡಿರುವ ಕೊಡುಗೆ ಅಪಾರ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ‘ಜನುಮದ ಜೋಡಿ’ ಸೇರಿದಂತೆ ಅಂಬರೀಶ್, ವಿಷ್ಣುವರ್ಧನ್, ದೇವರಾಜ್‌, ದರ್ಶನ್‌ ಹೀಗೆ ಹೆಸರಾಂತ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದಾರೆ. ಸಕ್ರಿಯಾವಾಗಿ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿ ಮನೆ ಮಾತಾದವರು.

- Advertisement -

Latest News

error: Content is protected !!