Saturday, May 18, 2024
Homeತಾಜಾ ಸುದ್ದಿವೈರಲ್ ಆಯ್ತು ಮೇಘನಾ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಚಿರು ಫೋಟೋ, ಈ ಅದ್ಭುತ...

ವೈರಲ್ ಆಯ್ತು ಮೇಘನಾ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಚಿರು ಫೋಟೋ, ಈ ಅದ್ಭುತ ಚಿತ್ರ ಯಾರ ಕೈಚಳಕ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಮೊನ್ನೆಯಷ್ಟೇ ಕುಟುಂಬದವರ ಸಮ್ಮುಖದಲ್ಲಿ ಮೇಘನಾ ರಾಜ್ ಸೀಮಂತ ನೆರವೇರಿದೆ, ಎಲ್ಲರ ಮುಖದಲ್ಲಿ ನಗುವಿದ್ದರೂ ಚಿರು ಇಲ್ಲ ಅನ್ನೋ ನೋವು ಎಲ್ಲರ ಮನಸ್ಸಿನಲ್ಲಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಮೇಘನಾಗೆ ಸ್ವಲ್ಪ ಮಟ್ಟಿಗಾದರೂ ಈ ನೋವು ಕಮ್ಮಿಯಾಗಲಿ ಅಂತಾ ಸೀಮಂತ ಕಾರ್ಯಕ್ರಮದಲ್ಲಿ ಚಿರುವಿನ ದೊಡ್ಡ ಪೋಸ್ಟರ್‌ವೊಂದನ್ನು ಇಡಲಾಗಿತ್ತು. ಚಿರು ಫೋಟೋ ಮುಂದೆಯೇ ಮೇಘನಾ ಚೇರ್ ಮೇಲೆ ಕುಳಿತುಕೊಂಡಿದ್ದು, ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಇದೇ ವೇಳೆ ಮೇಘನಾ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.

ಇದೀಗ ಮೇಘನಾ ಸೀಮಂತ್ ಫೋಟೋಗಳ ಪೈಕಿ ಅರಳಿದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘನಾ ಅವರು ಒಬ್ಬರೇ ನಿಂತುಕೊಂಡು ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋಗೆ ಕಲಾವಿದ ಕರಣ್ ಆಚಾರ್ಯ ಜೀವ ನೀಡಿದ್ದಾರೆ. ಅಂದರೆ ಆ ಫೋಟೋವನ್ನು ಎಡಿಟ್ ಮಾಡಲಾಗಿದೆ.

ಅಭಿಮಾನಿಯೊಬ್ಬರು ಮೇಘನಾರ ಒಂಟಿ ಫೋಟೋವನ್ನು ಪೋಸ್ಟ್ ಮಾಡಿ ಈ ಫೋಟೋಗೆ ಜೀವ ತುಂಬಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಕಲಾವಿದ ಕರಣ್ ಅದರಂತೆಯೇ ಮೇಘನಾ ಕೈ ಹಿಡಿದು ಚಿರು ಹೆಜ್ಜೆ ಹಾಕುತ್ತಿರುವ ರೀತಿ ಎಡಿಟ್ ಮಾಡಿದ್ದಾರೆ. ಚಿರುವಿನ ಮದುವೆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವನ್ನು ಮೇಘನಾ ಫೋಟೋ ಜೊತೆ ಎಡಿಟ್ ಮಾಡಿದ್ದಾರೆ. ಕಲಾವಿದ ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

- Advertisement -
spot_img

Latest News

error: Content is protected !!