Friday, December 6, 2024
Homeತಾಜಾ ಸುದ್ದಿಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ TV9ನ ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ TV9ನ ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನ

spot_img
- Advertisement -
- Advertisement -

ಬೆಂಗಳೂರು: TV9 ಸುದ್ದಿ ವಾಹಿನಿಯಲ್ಲಿ ತನ್ನ ವಾಯ್ಸ್ ಓವರ್ ಮೂಲಕ ಪತ್ರಿಕೋದ್ಯಮ ಲೋಕದಲ್ಲಿ ಚಿರಪರಿಚಿತರಾಗಿದ್ದ ಹಿರಿಯ ಪತ್ರಕರ್ತ ಹಾಗೂ ಟಿವಿ 9ನಲ್ಲಿ ಇನ್ ಪುಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಗರಾಜ ದೀಕ್ಷಿತ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿನ್ನೆ ತಡರಾತ್ರಿ ನಾಗರಾಜ ದೀಕ್ಷಿತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆಗಾಗಿ ಬೆಂಗಳೂರಿನ ಕೆಲ ಆಸ್ಪತ್ರೆಗಳಿಗೆ ಕೊಂಡೊಯ್ದಾಗ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದೆ ಎನ್ನಲಾಗಿದೆ. ಇದರಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ನಾಗರಾಜ್ ದೀಕ್ಷಿತ್ ವಿಧಿವಶರಾಗಿದ್ದಾರೆ.

ನಾಗರಾಜ್ ದೀಕ್ಷಿತ್ ಒಬ್ಬ ಬರಹಗಾರ, ತಮ್ಮ ವಾಯ್ಸ್ ಓವರ್ ಮೂಲಕವೂ ಜನರಿಗೆ ಚಿರಪರಿಚಿತರಾಗಿದ್ದರು. ಜೊತೆಗೆ ಇವರು ರಂಗ ಸಂಸ್ಕೃತಿ ಸೇರಿದಂತೆ ಹಲವು ನಾಟಕ ತಂಡಗಳ ಸಕ್ರೀಯ ಸದಸ್ಯನಾಗಿದ್ರು. ನಾಟಕ ರಂಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ರು.

- Advertisement -
spot_img

Latest News

error: Content is protected !!